ಸಾಂದರ್ಭಿಕ ಚಿತ್ರ
ಕ್ರಿಕೆಟ್
ಬಿಸಿಸಿಐಗೆ 52 ಕೋಟಿ ರು. ದಂಡ ವಿಧಿಸಿದ ಸಿಸಿಐ
ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೊಬ್ಬರಿ 52.24 ಕೋಟಿ....
ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೊಬ್ಬರಿ 52.24 ಕೋಟಿ ರುಪಾಯಿ ದಂಡ ವಿಧಿಸಿದೆ.
ಬಿಸಿಸಿಐ ಕಳೆದ ಐಪಿಎಲ್ ಸಮಯದಲ್ಲಿ ಮಾಧ್ಯಮ ಹಕ್ಕುಗಳ ವಿತರಣೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವಿಫಲವಾಗಿದೆ ಮತ್ತು ಹೆಚ್ಚು ಲಾಭಗಳಿಸಲು ಸ್ಪರ್ಧಾತ್ಮಕತೆಯನ್ನು ಗಾಳಿಗೆ ತೂರಿದೆ ಎಂದು ಸಿಸಿಐ ದೂರಿದೆ. ಅಲ್ಲದೆ ಸ್ಪರ್ಧಾತ್ಮಕತೆ ಮೀರಿ ಐಪಿಎಲ್ ಟೂರ್ನಿ ನಡೆಸಿದ್ದಕ್ಕಾಗಿ ಬಿಸಿಸಿಐಗೆ 52.24 ಕೋಟಿ ದಂಡವನ್ನೂ ವಿಧಿಸಿದೆ.
ಈ ಹಿಂದೆ 2013ರ ಫೆಬ್ರವರಿಯಲ್ಲಿ ಇದಕ್ಕೆ ಸಮಾನವಾದ ರೀತಿಯಲ್ಲಿ ಸಿಸಿಐ, ಬಿಸಿಸಿಐಗೆ ದಂಡ ವಿಧಿಸಿತ್ತು. ಆದರೆ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಬಿಸಿಸಿಐ, ನ್ಯಾಯಮಂಡಳಿಯಿಂದ ಪರವಾದ ತೀರ್ಪುನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಸಿಸಿಐ ವಿಧಿಸಿರುವ 44 ಪುಟಗಳ ಆದೇಶದಲ್ಲಿ, ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಬಿಸಿಸಿಐ ಒಟ್ಟು ವಹಿವಾಟಿನ ಶೇ. 4.48ರಷ್ಟು ಮಾತ್ರ ದಂಡ ವಿಧಿಸಲಾಗಿದೆ. 2013-14, 2014-15 ಮತ್ತು 2015-16ನೇ ಸಾಲಿನಲ್ಲಿ ಬಿಸಿಸಿಐ ಸರಾಸರಿ 1,164.7 ಕೋಟಿ ರು.ಗಳ ಸರಾಸರಿ ವಹಿವಾಟನ್ನು ಹೊಂದಿತ್ತು.
ಬಿಸಿಸಿಐ ಪ್ರಜ್ಞಾಪೂರ್ವಕವಾಗಿ ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ಮತ್ತು ಬಿಡ್ಡರ್‌ಗಳ ಪ್ರಸಾರ ಹಕ್ಕು ಹಾಗೂ ವಾಣಿಜ್ಯ ಆಸಕ್ತಿಯನ್ನು ಸಂರಕ್ಷಿಸಲು ಐಪಿಎಲ್ ಮೀಡಿಯಾ ಹಕ್ಕು ಒಪ್ಪಂದದಲ್ಲಿ ಅಡ್ಡಿಪಡಿಸಿದೆ ಎಂಬುದನ್ನು ಸಿಸಿಐ ಆಯೋಗವು ಮೌಲ್ಯಮಾಪನ ಮಾಡಿದೆ.

