ಸಚಿನ್ 40ರ ಹರೆಯದಲ್ಲೂ ಆಡಿದ್ದಾಗ ಆಶಿಶ್ ನೆಹ್ರಾ ಯಾಕೆ ಆಡಬಾರದು: ವೀರೂ ಪ್ರಶ್ನೆ

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಹಿರಿಯ ಆಟಗಾರ ಆಶಿಶ್ ನೆಹ್ರಾರನ್ನು ಆಯ್ಕೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ...
ಸಚಿನ್ ತೆಂಡೂಲ್ಕರ್, ಆಶಿಶ್ ನೆಹ್ರಾ
ಸಚಿನ್ ತೆಂಡೂಲ್ಕರ್, ಆಶಿಶ್ ನೆಹ್ರಾ
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಹಿರಿಯ ಆಟಗಾರ ಆಶಿಶ್ ನೆಹ್ರಾರನ್ನು ಆಯ್ಕೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ಆಶಿಶ್ ನೆಹ್ರಾ ಆಯ್ಕೆ ಕುರಿತಂತೆ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿದ್ದು ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 40ರ ಹರೆಯದಲ್ಲೂ ತಂಡದಲ್ಲಿ ಆಡಿದ್ದು 38 ವರ್ಷದ ಆಶಿಶ್ ನೆಹ್ರಾ ಯಾಕೆ ಆಡಬಾರದು ಎಂದು ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ. 
ವಿಶ್ವಕಪ್ ನಲ್ಲಿ ಆಡಲು ವಯಸ್ಸಿನ ಮಾನದಂಡವನ್ನು ಅನುಸರಿಸಬೇಕಾಗುತ್ತಾ ಎಂದು ನಾನು ಭಾವಿಸಿಲ್ಲ. ನೆಹ್ರಾ ಅವರು ಫಿಟ್ ಆಗಿದ್ದರೆ, ಕಡಿಮೆ ರನ್ ನೀಡಿ ವಿಕೆಟ್ ಪಡೆಯುವುದೇ ಆದರೆ ತಂಡದಲ್ಲಿ ಆಡುವುದರಲ್ಲಿ ತಪ್ಪೇನಿದೆ. ಅಂತ ಸನತ್ ಜಯಸೂರ್ಯ 42 ವರ್ಷದವರೆಗೂ ಸಚಿನ್ ತೆಂಡೂಲ್ಕರ್ 40ರ ಹರೆಯದಲ್ಲೂ ತಂಡದಲ್ಲಿ ಆಡಿರಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ ಆಡಲಿದ್ದು ಬಿಸಿಸಿಐ ಆಯ್ಕೆ ಸಮಿತಿ ಆಶಿಶ್ ನೆಹ್ರಾರನ್ನು ಆಯ್ಕೆ ಮಾಡಿತ್ತು. ಭಾರತ ಪರ 25 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಆಶಿಶ್ ನೆಹ್ರಾ ಅವರು 21.83 ಬೌಲಿಂಗ್ ಸರಾಸರಿ ಹೊಂದಿದ್ದು 34 ವಿಕೆಟ್ ಗಳನ್ನು ಪಡೆದಿದ್ದಾರೆ. 19 ರನ್ ಗಳಿಗೆ 4 ವಿಕೆಟ್ ಪಡೆದಿದ್ದು ಅತ್ಯುತ್ತಮ ಸಾಧನೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com