ನ್ಯೂಜಿಲ್ಯಾಂಡ್ ವಿರುದ್ಧ್ದ ಮೊದಲ ಟಿ 20 ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಲಿರುವ ಅಶಿಶ್ ನೆಹ್ರಾ

ಭಾರತೀಯ ಕ್ರಿಕೆಟಿಗ ಆಶಿಶ್ ನೆಹ್ರಾ, ನ್ಯೂಜಿಲ್ಯಾಂಡ್ ವಿರುದ್ಧ ನ.1 ರಂದು ದೆಹಲಿಯಲ್ಲಿ ನಡೆಯುವ ಆರಂಭಿಕ ಟಿ 20 ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ.........
ಆಶಿಶ್ ನೆಹ್ರಾ
ಆಶಿಶ್ ನೆಹ್ರಾ
ಹೈದರಾಬಾದ್: ಭಾರತೀಯ ಕ್ರಿಕೆಟಿಗ ಆಶಿಶ್ ನೆಹ್ರಾ,  ನ್ಯೂಜಿಲ್ಯಾಂಡ್ ವಿರುದ್ಧ ನ.1 ರಂದು ದೆಹಲಿಯಲ್ಲಿ ನಡೆಯುವ ಆರಂಭಿಕ ಟಿ 20 ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಲಿರುವುದಾಗಿ ಘೋಷಿಸಿದ್ದಾರೆ.
"ಜನರು ತಾವಾಗಿಯೇ ನೀವೇಕೆ ನಿವೃತ್ತರಾಗಿಲ್ಲ ಎಂದು ಕೇಳುವ ಮುನ್ನವೇ ನಾವು ನಿವೃತ್ತರಾಗಲಿರುವುದು ಒಳ್ಳೆಯದು " ಎಂದು ನೆಹ್ರಾ ಸುದ್ದಿಗಾರರೊಂದಿಗೆ ಹೇಳಿದರು.
ನಾನು ತಂಡದ ಆಡಳಿತ ಮತ್ತು ಸಮಿತಿಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ದೆಹಲಿಯಲ್ಲಿ ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ನನ್ನ ಕಡೆಯ ಪಂದ್ಯವಾಗಲಿದೆ. ನನ್ನ ತವರಿನ ಅಭಿಮಾನಿಗಳ ಮುಂದೆಯೇ ನಿವೃತ್ತಿ ಪಡೆಯುತ್ತಿರುವುದು ದೊಡ್ಡ ವಿಚಾರ.ನಾನು 20 ವರ್ಷಗಳ ಹಿಂದೆ ನನ್ನ ಮೊದಲ ರಣಜಿ ಟ್ರೋಫಿ ಪಂದ್ಯ ಆಡಿದ್ದೆ." ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ 20 ಪಂದ್ಯ ನಾಳೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಗೆ ಬಂದಿದ್ದ ನೆಹ್ರಾ ಸುದ್ದಿಗಾರರೊಡನೆ ಮಾತನಾಡಿದರು
"ನಾನು ಯಾವಾಗಲೂ ಶ್ರೇಷ್ಠ ಸ್ಥಾನದಲ್ಲಿ ಇರುವಾಗಲೇ ನಿವೃತ್ತಿ ಆಗಲು ಬಯಸುತ್ತೇನೆ, ಇದು ಸರಿಯಾದ ಸಮಯವೆಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಅವರಿಗೆ ನೆಹ್ರಾ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. . ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಒಟ್ಟು ಮೂರು ಏಕದಿನ ಮತ್ತು ಮೂರು ಟ್ವೆಂಟಿ 20 ಪಂದ್ಯ ಅ. 22 ರಿಂದ ಪ್ರಾರಂಬವಾಗಲಿದೆ.
ನಾನು ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸಹ ಆಡುತ್ತಿಲ್ಲ ಎಂದು ನೆಹ್ರಾ ಇದೇ ವೇಳೆ ದೃಢಪಡಿಸಿದರು. 
ನೆಹ್ರಾ ಈವರೆಗೆ 17 ಟೆಸ್ಟ್, 120 ಏಕದಿನ ಮತ್ತು 26 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com