2ನೇ ಪಂದ್ಯವನ್ನು ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ನಾಯಕ ಕೊಹ್ಲಿ ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಪುಣೆಯಲ್ಲಿ ಆಡಿದ್ದ ತಂಡವನ್ನೇ ಇಂದಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯಕ್ಕೆ ಉಳಿಸಿಕೊಂಡಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡಕೂಡ ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿದಿದ್ದು, ಎರಡನೇ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಭಾರತ ಈ ಪಂದ್ಯವನ್ನು ಗೆದ್ದರೆ ಸತತ 7 ಸರಣಿಗಳನ್ನು ಗೆದ್ದಂತಾಗುತ್ತದೆ. 2015ರಲ್ಲಿ ಭಾರತದಲ್ಲಿ ನಡೆದ ಸರಣಿಯಿಂದ ಈ ವರೆಗೂ ಭಾರತ ಏಕದಿನ ಸರಣಿ ಸೋತಿಲ್ಲ.