ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಮಾನನಷ್ಟ ಮೊಕದ್ದಮೆ ಗೆದ್ದ ಕ್ರಿಸ್ ಗೇಯ್ಲ್

ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮಹಿಳಾ ಥೆರಪಿಸ್ಟ್ ಗೆ ಮರ್ಮಾಂಗ ಪ್ರದರ್ಶಿಸಿದ್ದರು ಎಂದು ವರದಿ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮಹಿಳಾ ಥೆರಪಿಸ್ಟ್ ಗೆ ಮರ್ಮಾಂಗ ಪ್ರದರ್ಶಿಸಿದ್ದರು ಎಂದು ವರದಿ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಗೆದ್ದಿದ್ದಾರೆ. 
ನ್ಯೂ ಸೌತ್ ವೇಲ್ಸ್ ಸುಪ್ರೀಂ ಕೋರ್ಟ್ ನ ನ್ಯಾಯಧೀಶರ ಮುಂದೆ ನಡೆದ ವಿಚಾರಣೆಯಲ್ಲಿ ಆಸ್ಟ್ರೇಲಿಯಾ ಮಾಧ್ಯಮಗಳು ಕ್ರಿಸ್ ಗೇಯ್ಲ್ ವಿರುದ್ಧ ಮಾಡಿದ್ದ ವರದಿಗೆ ಪೂರಕವಾದ ಸಾಕ್ಷಿಯನ್ನು ನೀಡುವಲ್ಲಿ ಸೋತಿದ್ದಾರೆ. 
ವಿಚಾರಣೆ ನಂತರ ಮಾತನಾಡಿದ ಕ್ರಿಸ್ ಗೇಯ್ಲ್ ಅವರು ಪತ್ರಕರ್ತರೊಂದಿಗೆ ಮಾತನಾಡಿ ನಿಜಕ್ಕೂ ನ್ಯಾಯಾಧೀಶರ ತೀರ್ಮಾನದಿಂದ ನನಗೆ ಖುಷಿಯಾಗಿದೆ. ಕಾನೂನು ತಂಡವು ದೊಡ್ಡ ಕೆಲಸವನ್ನು ಮಾಡಿದ್ದಕ್ಕಾಗಿ ಧನ್ಯವಾದ ಹೇಳಿದರು. 
2015ರ ವಿಶ್ವಕಪ್ ವೇಳೆ ಮಸಾಜ್ ಮಾಡಲು ಬಂದಿದ್ದ ಮಹಿಳೆಗೆ ಕ್ರಿಸ್ ಗೇಯ್ಲ್ ಗುಪ್ತಾಂಗ ಪ್ರದರ್ಶಿಸಿದ್ದರು ಎಂದು ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಗಂಭೀರವಾಗಿ ಆರೋಪಿಸಿದ್ದವು. ಈ ಆರೋಪವನ್ನು ತಿರಸ್ಕರಿಸಿದ್ದ ಗೇಯ್ಲ್ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com