ಏಕದಿನ ಕ್ರಿಕೆಟ್‌: ಸ್ಟಂಪಿಂಗ್‌ ಶತಕ ಸಿಡಿಸಿ ವಿಶ್ವದಾಖಲೆ ಬರೆದ ಧೋನಿ

ಟೀಂ ಇಂಡಿಯಾದ ಚಾಣಾಕ್ಷ ಕೀಪರ್ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌...
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ
Updated on: 
ಕೊಲಂಬೊ: ಟೀಂ ಇಂಡಿಯಾದ ಚಾಣಾಕ್ಷ ಕೀಪರ್ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಭಾನುವಾರ ಶ್ರೀಲಂಕಾ ವಿರುದ್ಧದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ 100 ಸ್ಟಂಪಿಂಗ್ ಮಾಡುವ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸ್ಟಂಪಿಂಗ್‌ ಮಾಡಿದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಂದು ಶ್ರೀಲಂಕಾದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಅವರ 301ನೇ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದ್ದು, ಯಜುವೇಂದ್ರ ಚಹಾಲ್‌ ಎಸೆದ 45ನೇ ಓವರ್‌ನಲ್ಲಿ ಅಖಿಲ ಧನಂಜಯ ಅವರನ್ನು ಔಟ್‌ ಮಾಡಿದರು. ಈ ಮೂಲಕ ಧೋನಿ ಏಕದಿನ ಕ್ರಿಕೆಟ್‌ನಲ್ಲಿ 100 ಸ್ಟಂಪಿಂಗ್‌ ಮಾಡಿದ ವಿಶ್ವದ ಮೊದಲ ವಿಕೆಟ್‌ ಕೀಪರ್‌ ಎನಿಸಿದರು.
ಮಹೇಂದ್ರ ಸಿಂಗ್ ಧೋನಿ ಅವರು ಹರ್ಭಜನ್ ಸಿಂಗ್ ಬೌಲಿಂಗ್ ನಲ್ಲಿ ಅತಿ ಹೆಚ್ಚು(15) ಸ್ಟಂಪಿಂಗ್ ಮಾಡಿದ್ದಾರೆ
ಸದ್ಯ ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಾಕ್ಕರ ಅವರು ಸ್ಟಂಪಿಂಗ್‌ ಮೂಲಕ 99 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ಹಾದಿ ತೋರಿದ್ದಾರೆ. ಉಳಿದಂತೆ ಶ್ರೀಲಂಕಾದ ಕಲುವಿತರನ(75), ಪಾಕಿಸ್ತಾನದ ಮೋಯಿನ್‌ ಖಾನ್‌(73), ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್‌(55) ಅವರು ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com