ಬೆಲ್ಫಾಸ್ಟ್: 2015ರ ವಿಶ್ವಕಪ್ ಬಳಿಕ ತಂಡದಿಂದ ದೂರ ಉಳಿದಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಗೆ ಕ್ರಿಸ್ ಗೇಯ್ಲ್ ರನ್ನು 15 ಸದಸ್ಯರ ತಂಡಕ್ಕೆ ಆಯ್ಕೆ ಮಾಡಿದೆ. ಕ್ರಿಕೆಟ್ ಮಂಡಳಿಯಲ್ಲಿನ ಆಂತರಿಕ ಗೊಂದಲ ಹಾಗೂ ವೇತನ ತಾರತಮ್ಯದಿಂದಾಗಿ ಕ್ರಿಸ್ ಗೇಯ್ಲ್ ರನ್ನು ಮಂಡಳಿ ಹೊರಗಿಟ್ಟಿತ್ತು.
ಸದ್ಯ ವೆಸ್ಟ್ ಇಂಡೀಸ್ ತಂಡದ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಮತ್ತೇ ಬಲ ತುಂಬುವ ಸಲುವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಇನ್ನು ತಂಡಕ್ಕೆ ಮಾರ್ಲೋನ್ ಸ್ಯಾಮುಯೆಲ್ಸ್ ಮತ್ತು ಜೆರೋಮೆ ಟೇಲರ್ ಸಹ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಸ್ಯಾಮುಯೆಲ್ಸ್ ಕೊನೆಯದಾಗಿ 2016ರ ಅಕ್ಟೋಬರ್ ನಲ್ಲಿ ಕೊನೆಯ ಪಂದ್ಯವಾಡಿದ್ದರು. ಇದಾಗ ಬಳಿಕ ಅವರನ್ನು ಶ್ರೀಲಂಕಾ ಮತ್ತು ಜಿಂಬಾಬ್ವೆ ತ್ರಿಕೋನ ಸರಣಿಯಿಂದ ಕೈಬಿಡಲಾಗಿತ್ತು.