ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ, ಪೂಜಾರ ಸ್ಥಿರ, 5ನೇ ಸ್ಥಾನಕ್ಕೆ ಕುಸಿದ ಅಶ್ವಿನ್

ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ....
ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ
ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ
ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರು ಅನುಕ್ರಮವಾಗಿ ಎರಡು ಹಾಗೂ ಏಳನೇ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ. 
29 ವರ್ಷದ ವಿರಾಟ್ ಕೊಹ್ಲಿ 912 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಇದು ಬಾಲ್ ಟ್ಯಾಂಪರಿಂಗ್ ಹಗರಣದಿಂದಾಗಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರಿಗಿಂತಲೂ 17 ಪಾಯಿಂಟ್ ಕಡಿಮೆಯಾಗಿದೆ. ಅತ್ತ ಪೂಜಾರ 810 ರೇಟಿಂಗ್ ಅಂಕ ಪಡೆದುಕೊಳ್ಳುವ ಮೂಲಕ 7ನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (803 ರೇಟಿಂಗ್ ಪಾಯಿಂಟ್) ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ತಲುಪಿದ್ದಾರೆ. ಏತನ್ಮಧ್ಯೆ ಆಲ್ ರೌಂಡರ್ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. 
ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಂ, ಡೀನ್ ಎಲ್ಗರ್, ಫಾಫ್ ಡು ಪ್ಲೆಸಿಸ್ , ಟೆಂಬ ಬಾವುಮಾ ಸಹ ಏರಿಕೆಯನ್ನು ಕಂಡಿದ್ದಾರೆ. ಇನ್ನು ಬೌಲರ್‌ಗಳ ಪಟ್ಟಿಯನ್ನು ಕಗಿಸೋ ರಬಾಡ ಮುನ್ನಡೆಸುತ್ತಿದ್ದು ವೆರ್ನಾನ್ ಪಿಲಾಂಡರ್ ಸಹ ಗಮನಾರ್ಹ ಏರಿಕೆ ಕಂಡುಬಂದಿದ್ದಾರೆ. 
ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ 121 ರೇಟಿಂಗ್ ಅಂಕ ಹೊಂದಿರುವ ಭಾರತ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾವನ್ನು ಮೂರನೇ ಸ್ಥಾನದಿಂದ ಹಿಂದಕ್ಕೆ ತಳ್ಳಿರುವ ನ್ಯೂಜಿಲೆಂಡ್ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com