ವಿರಾಟ್ ಕೊಹ್ಲಿ-ನಿತೀಶ್ ರಾಣಾ
ಕ್ರಿಕೆಟ್
ತನ್ನನ್ನು ನಿಂದಿಸಿದ ಕೆಕೆಆರ್ ತಂಡದ ಆಟಗಾರನಿಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ನಡುವಿನ ಪಂದ್ಯದ ವೇಳೆ ತನ್ನನ್ನು ನಿಂದಿಸಿದ್ದ ಕೆಕೆಆರ್ ತಂಡದ ಆಟಗಾರನಿಗೆ...
ಕೋಲ್ಕತ್ತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ನಡುವಿನ ಪಂದ್ಯದ ವೇಳೆ ತನ್ನನ್ನು ನಿಂದಿಸಿದ್ದ ಕೆಕೆಆರ್ ತಂಡದ ಆಟಗಾರನಿಗೆ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ.
ಕೆಕೆಆರ್ ತಂಡದ ಆಟಗಾರ ನಿತೀಶ್ ರಾಣಾ ಅವರು ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ್ದರು. ಒಂದೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ವಿಕೆಟ್ ಪಡೆಯುವ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ ಆದ ವಿರಾಟ್ ಕೊಹ್ಲಿಯನ್ನು ರಾಣಾ ನಿಂದಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಒಬ್ಬ ಕಿರಿಯ ಆಟಗಾರ ಟೀಂ ಇಂಡಿಯಾದ ನಾಯಕನನ್ನು ನಿಂದಿಸಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.
ಇನ್ನು ಕ್ರಿಕೆಟ್ ಪ್ರೇಮಿಗಳು ಕೊಹ್ಲಿಯನ್ನು ನಿಂದಿಸಿದನ್ನು ಟೀಕೆ ಮಾಡುತ್ತಿದ್ದರೆ ಪಂದ್ಯ ಮುಗಿದ ನಂತರ ಕೊಹ್ಲಿ ರಾಣಾ ಅವರನ್ನು ಪ್ರೋತ್ಸಾಹಿಸಿ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಕೊಹ್ಲಿ ಉಡುಗೊರೆಯಾಗಿ ನೀಡಿರುವ ಬ್ಯಾಟ್ ಅನ್ನು ರಾಣಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿ ಅದರ ಕೆಳಗೆ ಧನ್ಯವಾದಗಳು ವಿರಾಟ್ ಅಣ್ಣ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ