ಡಯಾನಾ ಎಡ್ಲ್ಜಿ ಗೆ ಬಿಸಿಸಿಐ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು

ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕೈ ಡಯಾನಾ ಎಡ್ಲ್ಜಿ ಅವರಿಗೆ ಬಿಸಿಸಿಐ ನ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಲಾಗಿದೆ.
ಡಯಾನಾ ಎಡ್ಲ್ಜಿ ಗೆ ಬಿಸಿಸಿಐ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು
ಡಯಾನಾ ಎಡ್ಲ್ಜಿ ಗೆ ಬಿಸಿಸಿಐ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು
ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕೈ ಡಯಾನಾ ಎಡ್ಲ್ಜಿ ಅವರಿಗೆ ಬಿಸಿಸಿಐ ನ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಲಾಗಿದೆ. 
ಎಡ್ಲ್ಜಿ  ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಲಾಗಿದ್ದರೆ, ಆರಂಭಿಕ ಆಟಗಾರ್ತಿಯಾಗಿದ್ದ ಪಂಕಜ್ ರಾಯ್ ಅವರಿಗೆ ಮರನೋತ್ತರವಾಗಿ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಲಾಗಿದೆ. ಡಯಾನಾ ಎಡ್ಲ್ಜಿ  ಅವರು ಭಾರತದ ಪರವಾಗಿ 20 ಟೆಸ್ಟ್ ಪಂದ್ಯಗಳು ಹಾಗೂ 34 ಏಕದಿನ ಪಂದ್ಯಗಳನ್ನಾಡಿದ್ದು, 17 ವರ್ಷಗಳ ವೃತ್ತಿ ಜೀವನದಲ್ಲಿ ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್ ಗಳು ಹಾಗೂ ಏಕದಿನ ಪಂದ್ಯದಲ್ಲಿ 46 ವಿಕೆಟ್ ಗಳನ್ನು ಗಳಿಸಿದ್ದಾರೆ. 
ಭಾರತೀಯ ಮಹಿಳಾ ಕ್ರಿಕೆಟ್ ಗೆ ಡಯಾನಾ ಎಡ್ಲ್ಜಿ  ಅವರ ಕೊಡುಗೆ ಅಪಾರವಾಗಿದ್ದು, ಬಿಸಿಸಿಐ ನ ತ್ರಿಸದಸ್ಯ ಸಮಿತಿ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com