ರವಿಶಾಸ್ತ್ರಿ
ಕ್ರಿಕೆಟ್
'ಎದ್ದೇಳಿ ರವಿಶಾಸ್ತ್ರಿ' ಅಪಹಾಸ್ಯಕ್ಕೆ ಗುರಿಯಾದ ಟೀಂ ಇಂಡಿಯಾದ ಕೋಚ್, ವಿಡಿಯೋ ವೈರಲ್!
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಿನ್ನೆ ಆರಂಭಗೊಂಡಿದೆ. ನಿನ್ನೆ ನಡೆಯುತ್ತಿದ್ದ ಪಂದ್ಯದ ನಡುವೆ ಟೀಂ ಇಂಡಿಯಾದ ಕೋಚ್...
ಬರ್ಮಿಂಗ್ ಹ್ಯಾಮ್: ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಿನ್ನೆ ಆರಂಭಗೊಂಡಿದೆ. ನಿನ್ನೆ ನಡೆಯುತ್ತಿದ್ದ ಪಂದ್ಯದ ನಡುವೆ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ನಿದ್ರೆಗೆ ಜಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರವಿಶಾಸ್ತ್ರಿ ನಿದ್ರೆಗೆ ಜಾರಿದ್ದ ವೇಳೆ ಹರ್ಭಜನ್ ಸಿಂಗ್ ಕಾಂಮೆಂಟರಿಯಲ್ಲಿ ಕುಳಿತಿದ್ದು ಇದನ್ನು ಗಮನಿಸಿ ಭಜ್ಜಿ ಎದ್ದೇಳಿ ರವಿಶಾಸ್ತ್ರಿ ಎಂದು ಎಚ್ಚರಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ನಂತರ ರವಿಶಾಸ್ತ್ರಿ ತಂಡದ ಕೋಚ್ ಆಗಿ ಆಯ್ಕೆಗೊಂಡಿದ್ದರು. ತೀವ್ರ ವಿರೋಧದ ನಡುವೆ ರವಿಶಾಸ್ತ್ರಿ ಕೋಚ್ ಆಗಿದ್ದರಿಂದ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಆಟದ ಮಧ್ಯೆ ರವಿಶಾಸ್ತ್ರಿ ನಿದ್ರೆಗೆ ಜಾರಿರುವುದು ಸಖತ್ ಟ್ರೋಲ್ ಆಗುತ್ತಿದೆ. ಈ ವಿಡಿಯೋದಿಂದ ರವಿಶಾಸ್ತ್ರಿ ಅಪಹಾಸ್ಯಕ್ಕೆ ಗುರಿಯಾಗಿರುವುದಂತು ಸತ್ಯ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಆಂಗ್ಲರ ಜೊತೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ನಿನ್ನೆ ಪಂದ್ಯ ಆರಂಭವಾಗಿದ್ದು ಮೊದಲ ದಿನದಾಟಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 285 ರನ್ ಕಲೆ ಹಾಕಿದೆ.
After effects of full meals from your favourite Andhra mess

