ಇಶಾಂತ್ ಶರ್ಮಾ
ಇಶಾಂತ್ ಶರ್ಮಾ

ಇಶಾಂತ್ ಶರ್ಮಾ ಮಾರಕ ಬೌಲಿಂಗ್ ಗೆ ತತ್ತರಿಸಿದ ಇಂಗ್ಲೆಂಡ್: 2 ನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪತನ

ಇಂಗ್ಲೆಂಡ್- ಭಾರತ ನಡುವಿನ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತ ಇಂಗ್ಲೆಂಡ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಇಶಾಂತ್ ಶರ್ಮಾ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಆಟಗಾರರು ತತ್ತರಿಸಿದ್ದಾರೆ.
ಲಂಡನ್: ಇಂಗ್ಲೆಂಡ್- ಭಾರತ ನಡುವಿನ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತ ಇಂಗ್ಲೆಂಡ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಇಶಾಂತ್ ಶರ್ಮಾ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಆಟಗಾರರು ತತ್ತರಿಸಿದ್ದಾರೆ. 
2 ನೇ ಇನ್ನಿಂಗ್ಸ್ ನ 3 ನೇ ದಿನದ ಆಟದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡಿದ್ದು,  ಇಂಗ್ಲೆಂಡ್ ತಂಡ 144  ರನ್ ಗಳ ಮುನ್ನಡೆ ಸಾಧಿಸಿದೆ.  ವೇಗಿ ಇಶಾಂತ್ ಶರ್ಮಾ 11 ಓವರ್ ಗಳಲ್ಲಿ 41 ರನ್ ನೀಡಿ 4 ವಿಕೆಟ್ ಗಳಿಸಿದ್ದಾರೆ.  ಇನ್ನು ಆರ್ ಅಶ್ವಿನ್ ಸಹ ಇಂಗ್ಲೆಂಡ್ ಆಟಗಾರರನ್ನು ಕಟ್ಟಿಹಾಕುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದು, 18 ಓವರ್ ಗಳಲ್ಲಿ 43 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿದ್ದಾರೆ. 
ಕ್ರೀಸ್ ನಲ್ಲಿರುವ ಸ್ಯಾಮ್ ಕ್ಯುರನ್( 35 ಎಸೆತಗಳಲ್ಲಿ 30 ರನ್ ), ಈಗಾಗಲೇ ಔಟ್ ಆಗಿರುವ ಜೆಎಂ ಬೈರ್ಸ್ಟೊವ್ (40 ಎಸೆತಗಳಲ್ಲಿ 28 ರನ್) ದಾವಿದ್ ಮಲಾನ್ ( 64 ಎಸೆತಗಳಲ್ಲಿ 20 ರನ್) ಗಳಿಸಿರುವುದು ಗರಿಷ್ಠ ಮೊತ್ತವಾಗಿದ್ದು, ಜೋ ರೂಟ್ ಸೇರಿದಂತೆ ಹಲವು ಆಟಗಾರರು ಎರಡು ಅಂಕಿಯ ರನ್ ಗಳನ್ನೂ ದಾಟಲು ವಿಫಲರಾಗಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com