ಚೊಚ್ಚಲ ಶತಕ ತಪ್ಪಿಸಲು ಚೆಂಡನ್ನು ಬೌಂಡರಿಗೆ ಎಸೆದು ಟೀಕೆಗೆ ಗುರಿಯಾದ ವೇಗಿ, ತಪ್ಪಿನ ಅರಿವಾಗಿ ಕ್ಷಮೆಯಾಚನೆ!

ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ರ ಶತಕ ತಪ್ಪಿಸಲು ಲಂಕಾ ಬೌಲರ್ ಸೂರಜ್ ರಣದೀವ್ ಬೇಕು ಅಂತಲೆ ನೋಬಾಲ್ ಮಾಡಿದ್ದರು. ಇದೀಗ ಅದೇ ರೀತಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ರ ಶತಕ ತಪ್ಪಿಸಲು ಲಂಕಾ ಬೌಲರ್ ಸೂರಜ್ ರಣದೀವ್ ಬೇಕು ಅಂತಲೆ ನೋಬಾಲ್ ಮಾಡಿದ್ದರು. ಇದೀಗ ಅದೇ ರೀತಿ ಶತಕ ತಪ್ಪಿಸಲು ವೇಗಿಯೊಬ್ಬ ಚೆಂಡನ್ನು ಬೌಂಡರಿಗೆ ಎಸೆದು ಟೀಕೆಗೆ ಗುರಿಯಾಗಿದ್ದಾನೆ. 
ಇಂಗ್ಲೆಂಡ್ ನಲ್ಲಿ ನಡೆಯುತ್ತಿದ್ದ ಕ್ಲಬ್ ಕ್ರಿಕೆಟ್ ಟೂರ್ನಿಯೊಂದರಲ್ಲಿ ಮೈನ್ ಹೆಡ್ ಕ್ರಿಕೆಟ್ ಕ್ಲಬ್, ಪರ್ನಲ್ ಕ್ರಿಕೆಟ್ ಕ್ಲಬ್ ನೀಡಿದ್ದ 281 ರನ್ ಗುರಿ ಬೆನ್ನಟ್ಟಿತ್ತು. ಈ ವೇಳೆ ಬ್ಯಾಟ್ಸ್ ಮನ್ ಜೇ ಡ್ಯಾರೆಲ್ 98 ರನ್ ಬಾರಿಸಿ ಚೊಚ್ಚಲ ಶತಕದ ಅಂಚಿನಲ್ಲಿದ್ದರು. 
ತಂಡದ ಗೆಲುವಿಗೆ 2 ರನ್ ಹಾಗೂ ಬ್ಯಾಟ್ಸ್ ಮನ್ ಶತಕ ಸಿಡಿಸಲು 2 ರನ್ ಬೇಕಿತ್ತು. ಈ ವೇಳೆ ಪರ್ನಲ್ ತಂಡದ ವೇಗಿ ನೋಬಾಲ್ ಮಾಡಿ ಚೆಂಡನ್ನು ಬೌಂಡರಿಗೆ ಎಸೆದಿದ್ದರು. ವೇಗಿಯ ಈ ನಡೆ ಟೀಕೆಗೆ ಕಾರಣವಾಗಿತ್ತು. ಬಳಿಕ ಪರ್ನೆಲ್ ತಂಡದ ವೇಗಿ ತಮ್ಮ ವರ್ತನೆ ಕುರಿತಂತೆ ಕ್ಷಮೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com