ಟೀಂ ಇಂಡಿಯಾ ಆಟಗಾರರ ವಿಶಿಷ್ಟ ನೂತನ ದಾಖಲೆ, ಡಕ್​ಔಟ್‌ಗಳ ಸರಮಾಲೆ!

ಮುರಳಿ ವಿಜಯ್ 2, ದಿನೇಶ್ ಕಾರ್ತಿಕ್ 2, ಕುಲದೀಪ್ 2, ಮೊಹಮ್ಮದ್ ಶಮಿ 2 ಮತ್ತು ಇಶಾಂತ್ 1 ಬಾರಿ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು.
ಮುರಳಿ ವಿಜಯ್-ದಿನೇಶ್ ಕಾರ್ತಿಕ್-ಕುಲ್ದೀಪ್
ಮುರಳಿ ವಿಜಯ್-ದಿನೇಶ್ ಕಾರ್ತಿಕ್-ಕುಲ್ದೀಪ್
ಲಂಡನ್: ಪ್ರವಾಸಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ ಒಟ್ಟಾರೆ 9 ಬಾರಿ ಆಟಗಾರರು ಡಕ್​ಔಟ್‌ ಆಗಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. 
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 7 ಡಕ್​ಔಟ್‌ ಆಗಿವೆ. ಇದರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಮುರಳಿ ವಿಜಯ್ ಎರಡು ಬಾರಿ ಡಕ್​ಔಟ್‌ ಆಗಿದ್ದಾರೆ. ಇನ್ನು ಹಲವು ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದ ದಿನೇಶ್ ಕಾರ್ತಿಕ್ ಸಹ ಎರಡು ಬಾರಿ ಡಕ್​ಔಟ್‌ ಆಗಿದ್ದಾರೆ. ಅದರಲ್ಲಿ ಒಂದು ಗೋಲ್ಡನ್ ಡಕ್​ಔಟ್‌. 
ಇನ್ನು ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಯುವ ಸ್ಪಿನ್ನರ್ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಸಹ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ ನಲ್ಲೂ ಡಕ್​ಔಟ್‌ ಆಗಿದ್ದಾರೆ. ಇನ್ನು ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಲ್ಲಿ ತಲಾ ಒಂದು ಬಾರಿ ಡಕ್​ಔಟ್‌ ಆಗಿದ್ದಾರೆ.
ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಿನೇಶ್ ಕಾರ್ತಿಕ್ ಡಕ್ ಔಟ್ ಆಗಿದ್ದರು. ಇನ್ನು ದ್ವಿತೀಯ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ ಡಕ್ ಔಟ್ ಆಗಿದ್ದರು.
ಮುರಳಿ ವಿಜಯ್ 2, ದಿನೇಶ್ ಕಾರ್ತಿಕ್ 2, ಕುಲದೀಪ್ 2, ಮೊಹಮ್ಮದ್ ಶಮಿ 2 ಮತ್ತು ಇಶಾಂತ್ 1 ಬಾರಿ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com