ಹಾರ್ದಿಕ್ ಪಾಂಡ್ಯ ರನ್ ಪೇರಿಸಲು ಪರದಾಡುತ್ತಿರುವುದೇಕೆ: ವಿಂಡೀಸ್ ವೇಗಿ ಹೊಲ್ಡಿಂಗ್ ಹೇಳಿದ್ದೇನು?

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲಿಂಗ್ ನಲ್ಲಿ ವಿಕೆಟ್ ಹಾಗೂ ಬ್ಯಾಟಿಂಗ್ ನಲ್ಲಿ ರನ್ ಪೇರಿಸಲು ತಿಣುಕಾಡುತ್ತಿದ್ದು...
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
ಲಂಡನ್(ಇಂಗ್ಲೆಂಡ್): ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲಿಂಗ್ ನಲ್ಲಿ ವಿಕೆಟ್ ಹಾಗೂ ಬ್ಯಾಟಿಂಗ್ ನಲ್ಲಿ ರನ್ ಪೇರಿಸಲು ತಿಣುಕಾಡುತ್ತಿದ್ದು ಸದ್ಯದ ಮಟ್ಟಿಗೆ ಟೆಸ್ಟ್ ನಲ್ಲಿ ಅವರು ಪರಿಪೂರ್ಣ ಆಲ್ ರೌಂಡರ್ ಆಗಿಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ವೇಗಿ ಮೈಕೆಲ್ ಹೊಲ್ಡಿಂಗ್ ಹೇಳಿದ್ದಾರೆ. 
ಟೀಂ ಇಂಡಿಯಾದ ವೇಗಿ ಹಾರ್ದಿಕ್ ಪಾಂಡ್ಯಗೆ ಸರಿಯಾದ ಸಮತೋಲನವಿಲ್ಲ. ಆಲ್ ರೌಂಡರ್ ಆಗಿರುವ ಪಾಂಡ್ಯ ವೇಗಿಗಳಿಗೆ ನೆರವಾಗಬೇಕಿತ್ತು. ಆದರೆ ಪಾಂಡ್ಯ ಪರಿಣಾಕಾರಿಯಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು ಹೊಲ್ಡಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಲ್ ರೌಂಡರ್ ಎನಿಸಿಕೊಂಡವರು ಉತ್ತಮ ಬ್ಯಾಟ್ ಮನ್ ಆಗಿದ್ದರೆ ಬ್ಯಾಟಿಂಗ್ ನಲ್ಲಿ ಕನಿಷ್ಟ 60 ಅಥವಾ 70 ರನ್ ಬಾರಿಸುವ ಸಾಮರ್ಥ್ಯವಿರುತ್ತದೆ. ಇನ್ನು ಬೌಲಿಂಗ್ ನಲ್ಲಿ ಪ್ರತಿ ಪಂದ್ಯದಲ್ಲೂ 2 ರಿಂದ 3 ವಿಕೆಟ್ ಪಡೆಯಬಹುದು. ಆಗ ಮಾತ್ರ ಒಬ್ಬ ಆಲ್ ರೌಂಡರ್ ಗೆ ಸಂತೋಷ ಸಿಗುತ್ತದೆ. ಆದರೆ ಹಾರ್ದಿಕ್ ಪಾಂಡ್ಯ ರನ್ ಮತ್ತು ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ ಎಂದು ಹೊಲ್ಡಿಂಗ್ ಹೇಳಿದ್ದಾರೆ. 
ಕಳೆದ ವರ್ಷ ಜುಲೈ ನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ ಗಾಲೆ ಟೆಸ್ಟ್ ನಲ್ಲಿ ಅರ್ಧ ಶತಕ ಹಾಗೂ ಪಾಲೇಕೇಲೆಯಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇಲ್ಲಿಯವರೆಗೂ ಪಾಂಡ್ಯ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ಪಾಂಡ್ಯ ಆಡಿದ್ದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಪಡೆದಿರಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com