ವಿರಾಟ್-ಚೇತೇಶ್ವರ ಪೂಜಾರ ಅದ್ಭುತ ಆಟ: ಇಂಗ್ಲೆಂಡ್ ಗೆ 521 ರನ್ ಗುರಿ; 2 ನೇ ಇನ್ನಿಂಗ್ಸ್ ನಲ್ಲಿ 23 ರನ್ ಗಳಿಸಿದ ಆತಿಥೇಯ ತಂಡ

ಭಾರತ-ಇಂಗ್ಲೆಂಡ್ ನಡುವಿನ 3 ನೇ ಟೆಶ್ಟ್ ಪಂದ್ಯದ 3 ನೇ ದಿನ ಭಾರತ ಇಂಗ್ಲೆಂಡ್ ಗೆಲುವಿಗೆ 521 ರನ್ ಗಳ ಗುರಿ ನೀಡಿದೆ.
ವಿರಾಟ್ ಕೊಹ್ಲಿ-ಚೇತೇಶ್ವರ್ ಪೂಜಾರ
ವಿರಾಟ್ ಕೊಹ್ಲಿ-ಚೇತೇಶ್ವರ್ ಪೂಜಾರ
ನಾಟಿಂಗ್ ಹ್ಯಾಮ್: ಭಾರತ-ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯದ 3 ನೇ ದಿನ ಭಾರತ ಇಂಗ್ಲೆಂಡ್ ಗೆಲುವಿಗೆ 521 ರನ್ ಗಳ ಗುರಿ ನೀಡಿದೆ. 
ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಭಾರತ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್ ಗೆ 521 ರನ್ ಗಳ ಗುರಿ ನೀಡಿರುವ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. 
ವಿರಾಟ್ ಕೊಹ್ಲಿಗೆ ಸಾಥ್ ನೀಡಿದ ಚೇತೇಶ್ವರ್ ಪೂಜಾರ ಭಾರತ ತಂಡ ಅದ್ಭುತ ಇನ್ನಿಂಗ್ಸ್ ಕಟ್ಟುವುದಕ್ಕೆ ಸಹಕಾರಿಯಾದರು.  ಇನ್ನು ಇಂಗ್ಲೇಂಡ್ ನ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದ್ದ ಪಾಂಡ್ಯ ಭಾರತ ಎರಡನೇ ಇನ್ನಿಂಗ್ಸ್ ಆಡುವಾಗ ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿ ಅರ್ಧ ಶತಕ ಗಳಿಸಿದರು (52 ರನ್) ಗಳಿಸಿದರು. 
ಚೇತೇಶ್ವರ್ ಪೂಜಾರ 9 ಬೌಂಡರಿ ಸಹಿತ 72 ರನ್ ಗಳಿಸಿ ಔಟಾದರು. ಅಜಿಂಕ್ಯ ಅರಹಾನೆ 29, ರಿಷಬ್ ಪಂತ್ 1 ರನ್, ಶಮಿ 3 ರನ್ ಆರ್ ಅಶ್ವಿನ್ 1 ರನ್ ಗಳಿಸಿದರು.  ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿರುವ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com