ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲು ನಾವು ಬಿಡುವುದಿಲ್ಲ: ಜೋಸ್ ಬಟ್ಲರ್

ಪ್ರವಾಸಿ ಭಾರತ ಮೂರನೇ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆಲ್ಲಲು ನಾವು ಬಿಡುವುದಿಲ್ಲ ಎಂದು ಇಂಗ್ಲೆಂಡ್ ತಂಡದ ಆಟಗಾರ ನಾಯಕ ಜೋಸ್ ಬಟ್ಲರ್ ಹೇಳಿದ್ದಾರೆ...
ಜೋಸ್ ಬಟ್ಲರ್
ಜೋಸ್ ಬಟ್ಲರ್
ನಾಟಿಂಗ್ಹ್ಯಾಮ್: ಪ್ರವಾಸಿ ಭಾರತ ಮೂರನೇ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆಲ್ಲಲು ನಾವು ಬಿಡುವುದಿಲ್ಲ ಎಂದು ಇಂಗ್ಲೆಂಡ್ ತಂಡದ ಆಟಗಾರ ನಾಯಕ ಜೋಸ್ ಬಟ್ಲರ್ ಹೇಳಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೈಲುಗೈ ಸಾಧಿಸಿದೆ. ಐದನೇ ದಿನದಾಟದಲ್ಲಿ ಭಾರತ ಇನ್ನು ಒಂದು ವಿಕೆಟ್ ಪಡೆದರೆ ಟೀಂ ಇಂಡಿಯಾ ಸುಲಭವಾಗಿ ಗೆಲುವು ಸಾಧಿಸಲಿದೆ. 
ಇನ್ನು ನಾಲ್ಕನೇ ದಿನದಾಟದಲ್ಲಿ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಶತಕದ ಜೊತೆಯಾಟ ನೀಡಿ ಭಾರತ ತಂಡದ ಗೆಲುವಿಗೆ ಕೊಂಚ ತಣ್ಣೀರೆರೆಚ್ಚಿದ್ದರು. ಆದರೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಮಾರಣಾಂತಿಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಶತಕ ಸಿಡಿಸಿ ಔಟಾಗಿದ್ದರು. 
ಆ ನಂತರ ಬಂದ ಇಂಗ್ಲೆಂಡ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದು ಇನ್ನು ಒಂದು ವಿಕೆಟ್ ಮಾತ್ರ ಬಾಕಿ ಇದೆ. ನಾವು ದಿನವಿಡೀ ನಿಜವಾಗಿಯೂ ಚೆನ್ನಾಗಿ ಆಡಿದ್ದೇವು. ಇನ್ನು ಒಂದು ವಿಕೆಟ್ ಬಾಕಿ ಇದ್ದು ಇಂದಿನ ದಿನದಾಟದಲ್ಲಿ ಇಬ್ಬರು ಆಟಗಾರರು ತೀವ್ರ ಪ್ರತಿಸ್ಫರ್ಧೆ ನೀಡುವ ಮೂಲಕ ಭಾರತ ಆಟಗಾರರಿಗೆ ಸುಲಭವಾಗಿ ಗೆಲ್ಲಲು ಬಿಡುವುದಿಲ್ಲ ಎಂದು ಜೋಸ್ ಬಟ್ಲರ್ ಹೇಳಿದ್ದಾರೆ. 
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 329 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಪ್ರಥಮ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 161 ರನ್ ಗಳಿಗೆ ಸರ್ವಪತನ ಕಂಡಿತ್ತು. ಇನ್ನು 168 ರನ್ ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ 352 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ತಂಡಕ್ಕೆ 521 ರನ್ ಗಳ ಗೆಲುವಿನ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದ್ದು ಇನ್ನು ಗೆಲ್ಲಲು 210 ರನ್ ಗಳನ್ನು ಪೇರಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com