

ಕೊಲಂಬೊ: ದೇಶಿ ಟಿ 20 ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಆರೋಪದಡಿ ಇಬ್ಬರು ಭಾರತೀಯರನ್ನು ಶ್ರೀಲಂಕಾ ಕ್ರಿಕೆಟ್ ನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ಪಂದ್ಯ ನಡೆಯುತ್ತಿರಬೇಕಾದರೆ ಪದೇ ಪದೇ ಕರೆ ಮಾಡಿ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವರನ್ನು ಗಮನಿಸಿದ ಅಧಿಕಾರಿಗಳು ಇಬ್ಬರು ಭಾರತೀಯರನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್(ಎಸ್ಎಲ್ ಸಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಡಿಯನ್ ಕ್ರಿಕೆಟ್ ಲೀಗ್ ನಂತರ ಶ್ರೀಲಂಕಾದಲ್ಲೂ ದೇಶಿ ಟಿ 20 ಲೀಗ್ ನಡೆಯುತ್ತಿದ್ದು, ಈ ಟೂರ್ನಿ ಮ್ಯಾಚ್-ಫಿಕ್ಸರ್ ಗಳನ್ನು ಆಕರ್ಷಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಟೀಂ ಹೊಟೆಲ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಫಿಕ್ಸರ್ ಗಳು ತಮ್ಮನ್ನು ಸಂಪರ್ಕಿಸಲು ಯತ್ನಿಸಿದರೆ ಮಾಹಿತಿ ನೀಡಬೇಕೆಂದು ಎಚ್ಚರಿಕೆ ನೀಡಲಾಗಿದೆ.