ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನ ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಮಯಾಂತಿ, 'ಈ ಹಿಂದೆ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾರನ್ನು ಸಂದರ್ಶನ ಮಾಡುವಾಗ, ಯಾರೋ ನನ್ನ ಸ್ಕ್ರೀನ್ ಶಾಟ್ ತೆಗೆದು, ಪತಿ ಸ್ಟುವರ್ಟ್ ಬಿನ್ನಿಗೆ ಕಳುಹಿಸಿದ್ದರು. ಅಲ್ಲದೆ ನಾನು ಧರಿಸಿದ್ದ ಉಡುಪಿನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ.. ನಾನು ಹಾಕೋ ಹೈ ಹೀಲ್ಸ್ ಚಪ್ಪಲಿ ಬಗ್ಗೆಯೂ, ಸಾಕಷ್ಟು ಟೀಕೆ ಮಾಡಿದ್ದರು. ಆದರೆ ಇದಕ್ಕೆಲ್ಲ ನಾನಾಗಲಿ ಅಥವಾ ನನ್ನ ಪತಿಯಾಗಲಿ ಸೊಪ್ಪು ಹಾಕಿಲ್ಲ. ಇಂತಹ ಟೀಕೆ ಟಿಪ್ಪಣಿಗಳು ಸಾಮಾನ್ಯ. ನನ್ನ ಉಡುಪು ನನ್ನ ಹಕ್ಕು. ಇದರಲ್ಲಿ ಬೇರೊಬ್ಬರ ಮಧ್ಯ ಪ್ರವೇಶ ಅಥವಾ ನಿರ್ದೇಶನವನ್ನು ನಾನು ಒಪ್ಪುವುದಿಲ್ಲ. ನಾನು ಐದೋ, ಆರೋ ಇಂಚು ಹೀಲ್ಸ್ ಹಾಕ್ತೀನಿ, ಅದ್ರಿಂದ ನಿಮಗೇನು? ಎಂದು ಹೇಳಿದ್ದಾರೆ.