ಮಿಥಾಲಿ-ಪವಾರ್ ಕಿತ್ತಾಟ: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಆಗ್ತಾರಾ ಕನ್ನಡಿಗ ವೆಂಕಟೇಶ್ ಪ್ರಸಾದ್?

ಟೀಂ ಇಂಡಿಯಾ ಮಾಜಿ ನಾಯಕಿ ಮಿಥಾಲಿ ರಾಜ್ ಹಾಗೂ ಕೋಚ್ ರಮೇಶ್ ಪವಾರ್ ನಡುವಿನ ಕಿತ್ತಾಟ ಪರಿಣಾಮ ರಮೇಶ್ ಕೋಚ್ ಸ್ಥಾನದಿಂದ ಕೆಳಗಿಳಿಯಬೇಕಾಗಿದ್ದು ಆ ಸ್ಥಾನಕ್ಕೆ...
ಮಿಥಾಲಿ ರಾಜ್, ವೆಂಕಟೇಶ್ ಪ್ರಸಾದ್
ಮಿಥಾಲಿ ರಾಜ್, ವೆಂಕಟೇಶ್ ಪ್ರಸಾದ್
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕಿ ಮಿಥಾಲಿ ರಾಜ್ ಹಾಗೂ ಕೋಚ್ ರಮೇಶ್ ಪವಾರ್ ನಡುವಿನ ಕಿತ್ತಾಟ ಪರಿಣಾಮ ರಮೇಶ್ ಕೋಚ್ ಸ್ಥಾನದಿಂದ ಕೆಳಗಿಳಿಯಬೇಕಾಗಿದ್ದು ಆ ಸ್ಥಾನಕ್ಕೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆಗಳಿವೆ.
ಬಿಸಿಸಿಐ ಕೋಚ್ ರಮೇಶ್ ಪವಾರನ್ ರನ್ನು ಕೋಚ್ ಸ್ಥಾನದಿಂದ ಕಿತ್ತುಹಾಕಿದ್ದು ಹೊಸ ಕೋಚ್ ಗಾಗಿ ಅರ್ಜಿ ಆಹ್ವಾನಿಸಿದೆ. ಇನ್ನು ಮಾಹಿತಿ ಪ್ರಕಾರ ಈ ಮೂವರ ನಡುವೆ ನೇರ ಸ್ಪರ್ಧೆ ಏರ್ಪಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. 
ಮಹಿಳಾ ತಂಡದ ಕೋಚ್ ಹುದ್ದೆ ರೇಸ್ ನಲ್ಲಿ ಆಸ್ಟ್ರೇಲಿಯಾದ ಟಾಮ್ ಮೂಡಿ ಮತ್ತು ಡೇವ್ ವಾಟ್ಮೋರ್ ಹಾಗೂ ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮುಂಚೂಣಿಯಲ್ಲಿದ್ದಾರೆ. 
ಇನ್ನು ಡಿಸೆಂಬರ್ 20ರಂದು ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಬಿಸಿಸಿಐ ದೇಶಿಯ ಕೋಚ್ ಗೆ ಮಣೆ ಹಾಕಿದರೆ ವೆಂಕಟೇಶ್ ಪ್ರಸಾದ್ ತಂಡದ ಕೋಚ್ ಆಗುವ ಸಾಧ್ಯತೆಗಳು ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com