ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಶ್ರೀಲಂಕಾ ಯುವ ಸ್ಪಿನ್ನರ್ ಅಖಿಲಾ ಧನಂಜಯ್ ಅಮಾನತು!

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಶ್ರೀಲಂಕಾ ತಂಡದ ಆಫ್ ಸ್ಪಿನ್ನರ್ ಅಖಿಲಾ ಧನಂಜಯ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಮಾನತು ಮಾಡಲಾಗಿದೆ...
ಅಖಿಲಾ ಧನಂಜಯ್
ಅಖಿಲಾ ಧನಂಜಯ್
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಶ್ರೀಲಂಕಾ ತಂಡದ ಆಫ್ ಸ್ಪಿನ್ನರ್ ಅಖಿಲಾ ಧನಂಜಯ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಮಾನತು ಮಾಡಲಾಗಿದೆ. 
ಲಂಕಾ ತಂಡದ ಸ್ಪಿನ್ನರ್ ಅಖಿಲಾ ಧನಂಜಯ್ ಅವರ ಬೌಲಿಂಗ್ ಮಾಡುವ ಶೈಲಿ ಶಂಕಾಸ್ಪದವಾಗಿದೆ. ಹೀಗಾಗಿ ಈಗಿನಿಂದಲೆ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗುತ್ತಿದೆ ಎಂದು ತನ್ನ ಟ್ವೀಟರ್ ನಲ್ಲಿ ತಿಳಿಸಿದೆ. 
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಧನಂಜಯ್ ಅವರು ಬೌಲಿಂಗ್ ಮಾಡುವ ಶೈಲಿಯನ್ನು ಪ್ರಶ್ನಿಸಲಾಗಿತ್ತು. ಬಳಿಕ ಬೌಲಿಂಗ್ ಶೈಲಿಯ ಸ್ವಯಂ ಮೌಲ್ಯಮಾಪನ ಮಾಡಲು ಆದೇಶಿಸಲಾಗಿತ್ತು. ಮೌಲ್ಯಮಾಪನದಲ್ಲಿ ಅಖಿಲಾ ಎಸೆತಗಳು 15 ಡಿಗ್ರಿ ಪ್ರಮಾಣವನ್ನು ಮೀರಿದ್ದು ಕಂಡುಬಂದಿತ್ತು.
ಇದರಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಂಡಿರುವ ಅಖಿಲಾ ಧನಂಜಯ್ ಅವರು ಕೇವಲ ದೇಶೀಯ ಕ್ರಿಕೆಟ್ ನಲ್ಲಿ ಆಡಬಹುದಾಗಿದೆ. ಅದು ಕೂಡ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಒಪ್ಪಿಗೆ ಪಡೆದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com