ರಣಜಿ ಟ್ರೋಫಿ: ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಮುಂಬೈ ಆಲ್ ರೌಂಡರ್ ಶಿವಂ ದುಬೆ

ರಣಜಿ ಟ್ರೋಫಿಯಲ್ಲಿ ಬರೋಡಾ ವಿರೋಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದಾರೆ.
ಶಿವಂ ದುಬೆ
ಶಿವಂ ದುಬೆ
Updated on: 
ಮುಂಬೈ: ರಣಜಿ ಟ್ರೋಫಿಯಲ್ಲಿ ಬರೋಡಾ ವಿರೋಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್  ಸಿಡಿಸಿದ್ದಾರೆ.
ಐಪಿಎಲ್ ಪಂದ್ಯಕ್ಕಾಗಿ ಪ್ರತಿಭೆ ಪ್ರದರ್ಶಿಸಲು ಟಿ-20 ಟೂರ್ನಿಯವರೆಗೂ ಶಿವಂ ದುಬೆ ಕಾಯಬೇಕಾಗಿಲ್ಲ. ರಣಜಿ ಟ್ರೋಫಿಯಲ್ಲೇ ಆ ಅವಕಾಶ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಐಪಿಎಲ್ ಹರಾಜಿಗೂ ಮುಂಚಿತವಾಗಿ ಬಿಸಿಸಿಐ ಸಯ್ಯದ್ ಮುಸ್ತಾಕ್ ಆಲಿ  ಟಿ-20 ಟೂರ್ನಮೆಂಟ್ ಆಯೋಜಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿತ್ತು.
ಆದರೆ, ಈ ಬಾರಿ ಹರಾಜು ವರ್ಷದ ಆರಂಭದಲ್ಲೇ ನಡೆದಿದ್ದರೂ ರಣಜಿ ಟ್ರೋಫಿ ಮೂಲಕ ಶಿವಂ ದುಬೆ, ಐಪಿಎಲ್ ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com