3ನೇ ಅಂಪೈರ್‌ಗೆ ಮುಖಭಂಗ: ಔಟ್ ಕೊಟ್ಟಿದ್ರೂ, ಎದುರಾಳಿ ತಂಡ ಮಾಡಿದ್ದು ನೋಡಿದ್ರೆ ಅಚ್ಚರಿ ಪಡುತ್ತೀರಿ, ವಿಡಿಯೋ ವೈರಲ್!

ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಲೀಗ್ ಆರಂಭಿಕ ಪಂದ್ಯ ಆಡಿಲೇಡ್ ಸ್ಟ್ರೇಕರ್ಸ್ ಹಾಗೂ ಬ್ರಿಸ್ಬೇನ್ ಹಿಟ್ ತಂಡಗಳ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಬ್ರಿಸ್ಬೇನ್ ತಂಡದ ಬ್ಯಾಟ್ಸ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಲೀಗ್ ಆರಂಭಿಕ ಪಂದ್ಯ ಆಡಿಲೇಡ್ ಸ್ಟ್ರೈಕರ್ಸ್ ಹಾಗೂ ಬ್ರಿಸ್ಬೇನ್ ಹಿಟ್ ತಂಡಗಳ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಬ್ರಿಸ್ಬೇನ್ ತಂಡದ ಬ್ಯಾಟ್ಸ್ ಮನ್ ಜೇಮ್ಸ್ ಪ್ಯಾಟಿನ್ಸನ್ ನಾಟೌಟ್ ಆಗಿದ್ದರು ಔಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿದ್ದರು. ಆದರೆ ಎದುರಾಳಿ ತಂಡ ಮಾಡಿದ್ದನ್ನು ನೋಡಿದರೆ ನೀವೂ ಅಚ್ಚರಿ ಪಡುತ್ತೀರಿ. 
ಜೇಮ್ಸ್ ಪ್ಯಾಟಿನ್ಸನ್ 13ನೇ ಓವರ್ 3ನೇ ಎಸೆತದಲ್ಲಿ ಒಂದು ರನ್ ಕದಿಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಈ ವೇಳೆ ರನೌಟ್ ಮಾಡಲು ಯತ್ನಿಸಿದ್ದ ಅಡಿಲೇಡ್ ತಂಡದ ಆಟಗಾರರು ಅಂಪೈರ್ ಗೆ ಮನವಿ ಸಲ್ಲಿಸಿದ್ದರು. 
ಮೈದಾನದ ಅಂಪೈರ್ ಮೂರನೇ ಅಂಪೈರ್ ಗೆ ಮನವಿ ಮಾಡಿದ್ದು ಈ ವೇಳೆ ದೃಶ್ಯಗಳನ್ನು ಪರೀಕ್ಷಿಸಿದ ಮೂರನೇ ಅಂಪೈರ್ ರನೌಟ್ ಆಗದಿದ್ದರು ಔಟ್ ಎಂದು ತೀರ್ಪು ನೀಡಿದ್ದರು. ಇದನ್ನು ಕಂಡ ಜೇಮ್ಸ್ ಕ್ಷಣ ಕಾಲ ಶಾಕ್ ಆಗಿ ಮೈದಾನದಲ್ಲೇ ನಿಂತರು. ಕೊನೆಗೆ ಬೇಸರಗೊಂಡು ಮೈದಾನದಿಂದ ಹೊರಗೆ ಹೋಗುವಾಗ ಎದುರಾಳಿ ತಂಡ ಜೇನ್ಸ್ ನನ್ನು ಕರೆದು ಮತ್ತೆ ಬ್ಯಾಟಿಂಗ್ ಮಾಡುವಂತೆ ಸೂಚಿಸಿತು. ಈ ದೃಶ್ಯ ಎಂತವರನ್ನು ಬೆರಗು ಮೂಡಿಸಿದೆ. 
ಇನ್ನು ಮೂರನೇ ಅಂಪೈರ್ ತೀರ್ಪನ್ನು ಧಿಕ್ಕರಿಸಿ ಆಟಗಾರನಿಗೆ ಆಡಲು ಅವಕಾಶ ಮಾಡಿಕೊಟ್ಟ ಅಡಿಲೇಡ್ ತಂಡಕ್ಕೆ ಅಭಿಮಾನಿಗಳು ಶಹಬಾಸ್ ಅಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com