ಡಬ್ಲ್ಯು.ವಿ.ರಾಮನ್
ಕ್ರಿಕೆಟ್
ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಡಬ್ಲ್ಯು.ವಿ. ರಾಮನ್ ನೇಮಕ
ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಡಬ್ಲ್ಯು.ವಿ.ರಾಮನ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಆಯ್ಕೆ ಮಾಡಿದೆ.
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಡಬ್ಲ್ಯು.ವಿ.ರಾಮನ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಆಯ್ಕೆ ಮಾಡಿದೆ.
ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್, ಹರ್ಷಲ್ ಗಿಬ್ಸ್ ಮತ್ತು ರಮೇಶ್ ಪೊವಾರ್ ಸೇರಿದಂತೆ 28 ಹಿರಿಯ ಕ್ರಿಕೆಟಿಗರು ಮಹಿಳಾ ತಂಡದ ಕೋಚ್ ಹುದ್ದೆ ಬಯಸಿ ಅರ್ಜಿ ಸಲ್ಲಿಸಿದ್ದರು.
ಬಿಸಿಸಿಐ ಆಯ್ಕೆ ಸಮಿತಿ 28 ಅಭ್ಯರ್ಥಿಗಳ ಪಟ್ಟಿಯನ್ನು ಪರಿಷ್ಕರಿಸಿ, ಡಬ್ಲ್ಯು.ವಿ.ರಾಮನ್, ವೆಂಕಟೇಶ್ ಪ್ರಸಾದ್, ಮನೋಜ್ ಪ್ರಭಾಕರ್, ಟ್ರೆಂಟ್ ಜಾನ್‌ಸ್ಟನ್, ಮಾರ್ಕ್ ಕೋಲ್ಸ್, ಡಿಮಿಟ್ರಿ ಮಸ್ಕರೆನ್ಹಾಸ್ ಮತ್ತು ಬ್ರಾಡ್ ಹಾಗ್ ಅವರ ಸಂದರ್ಶನ ನಡೆಸಿ ಅಂತಿಮವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕನ್ಸಲ್ಟಂಟ್ ಆಗಿರುವ 53 ವರ್ಷದ ರಾಮನ್ ಅವರನ್ನು ಆಯ್ಕೆ ಮಾಡಿದೆ.
ಮಹಿಳಾ ತಂಡದ ಕೋಚ್ ಆಯ್ಕೆ ವೇಳೆ ಗ್ಯಾರಿ ಕರ್ಸ್ಟನ್ ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ ಅವರು ಐಪಿಎಲ್ ನಲ್ಲಿ ಆರ್ ಸಿಬಿ ಜೊತೆಗಿನ ಉದ್ಯೋಗ ಬಿಟ್ಟು ಬರಲು ಸಿದ್ಧವಿಲ್ಲದ ಕಾರಣ ರಾಮನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಮಾಜಿ ನಾಯಕ ಕಪಿಲ್ ದೇವ್, ಅನ್ಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ನೇತೃತ್ವದ ಆಯ್ಕೆ ಸಮಿತಿ ಕೋಚ್ ಆಕಾಂಕ್ಷಿಗಳ ಸಂದರ್ಶನ ನಡೆಸಿದೆ.

