ಕೊಹ್ಲಿ ಆಕ್ರಮಣಕಾರಿ ವರ್ತನೆ ಸಮರ್ಥಿಸಿದ ಪೈನ್: 3ನೇ ಟೆಸ್ಟ್ ಗೆಲ್ಲಲು ಆಸೀಸ್ ನಾಯಕನ ಮೈಂಡ್ ಗೇಮ್?

ಪರ್ತ್ ನಲ್ಲಿ ನಡೆದ 2 ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೊಂದಿಗೆ ವಾಗ್ವಾದಕ್ಕಿಳಿದಿದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್, ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ನಾಯಕನ
ಕೊಹ್ಲಿ ಆಕ್ರಮಣಕಾರಿ ವರ್ತನೆ ಸಮರ್ಥಿಸಿದ ಪೈನ್ : 3 ನೇ ಟೆಸ್ಟ್ ಗೆಲ್ಲಲು ಆಸೀಸ್ ನಾಯಕನ ಮೈಂಡ್ ಗೇಮ್?
ಕೊಹ್ಲಿ ಆಕ್ರಮಣಕಾರಿ ವರ್ತನೆ ಸಮರ್ಥಿಸಿದ ಪೈನ್ : 3 ನೇ ಟೆಸ್ಟ್ ಗೆಲ್ಲಲು ಆಸೀಸ್ ನಾಯಕನ ಮೈಂಡ್ ಗೇಮ್?
ಮೆಲ್ಬೋರ್ನ್: ಪರ್ತ್ ನಲ್ಲಿ ನಡೆದ 2 ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೊಂದಿಗೆ ವಾಗ್ವಾದಕ್ಕಿಳಿದಿದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್, ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ನಾಯಕನ ಆಕ್ರಮಣಕಾರಿ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂಬರುವ 3 ನೇ ಟೆಸ್ಟ್ ಬಗ್ಗೆ ಮಾತನಾಡಿರುವ ಟಿಮ್ ಪೈನ್, ಮೆಲ್ಬೋರ್ನ್ ನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ತೀವ್ರವಾದ ಪೈಪೋಟಿ ನೀಡುವ ಭರವಸೆಯಲ್ಲಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ವರ್ತನೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಟಿಮ್ ಪೈನ್, ಈಗ ಆ ವಾಗ್ವಾದದ ಘಟನೆ ತಮಗೆ ಸವಿನೆನಪಾಗಿರಲಿದೆ ಎಂದು ಹೇಳಿದ್ದಾರೆ. 
ಕೊಹ್ಲಿ ಎಂದಿಗೂ ಸೋಲುವುದನ್ನು ಇಷ್ಟಪಡುವುದಿಲ್ಲ, ಅವರ ಆಕ್ರಮಣಕಾರಿ ವರ್ತನೆ ಜನರನ್ನು ಆಕರ್ಷಿಸುತ್ತದೆ. ನಾನು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಆಟವನ್ನು ಇಷ್ಟಪಡುತ್ತಿದ್ದೆ. ವಿರಾಟ್ ಕೊಹ್ಲಿ ಆಕ್ರಮಣಕಾರಿ ಜನರನ್ನು ಆಕರ್ಷಿಸುತ್ತದೆ ಎಂದು ಟಿಮ್ ಪೈನ್ ಮೆಲ್ಬೋರ್ನ್ ಹೆಲ್ರಾಡ್ ಸನ್ ಗೆ ಬರೆದ ಅಂಕಣದಲ್ಲಿ ಹೇಳಿದ್ದಾರೆ. 
ಕೋಹ್ಲಿ ಆಕ್ರಮಣಕಾರಿ ವರ್ತನೆಯಿಂದ ನಾನು ಸಿಟ್ಟಾಗಲಿಲ್ಲ, ಆ ಘಟನೆ ಸವಿನೆನಪಾಗಿರಲಿದೆ. ಕೊಹ್ಲಿ ಪಂದ್ಯವನ್ನು ಸೋಲುವುದಕ್ಕೆ ಇಷ್ಟಪಡುವುದಿಲ್ಲ, ವಿರಾಟ್ ಕೊಹ್ಲಿ ಆಡುವ ರೀತಿಯನ್ನು ಇಷ್ಟಪಡುತ್ತೇನೆ, ಆತನ ಕ್ರೀಡಾಸಕ್ತಿಯಷ್ಟೇ ಅಲ್ಲದೇ, ಆನ್ ಫೀಲ್ಡ್ ನಲ್ಲಿ ಆಕ್ರಮಣಕಾರಿ ವರ್ತನೆಯೂ ಜನರನ್ನು ಆತನೆಡೆಗೆ ಆಕರ್ಷಿಸುತ್ತದೆ ಎಂದು ಪೈನ್ ಹೇಳಿದ್ದಾರೆ. ಟಿಮ್ ಪೈನ್ ನ ಈ ಹೇಳಿಕೆ "ಕೊಹ್ಲಿಯನ್ನು ಹೊಗಳುವ ಮೂಲಕ ಆಸೀಸ್ ನಾಯಕ 3ನೇ ಟೆಸ್ಟ್ ನ್ನು ಗೆಲ್ಲಲು ಮೈಂಡ್ ಗೇಮ್ ಮೊರೆಹೋಗಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com