2018 ಹಿನ್ನೋಟ: ಕೊಹ್ಲಿ, ಮಿಥಾಲಿ, #MeToo, ಕಣ್ಣೀರು!

2018ರಲ್ಲಿ ಕ್ರಿಕೆಟ್ ನಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಗಳು ಆಗಿಲ್ಲ. ಆದರೆ ಸ್ಯಾಂಡ್ ಪೇಪರ್, MeToo ನಂತಹ ಕೆಲ ಪ್ರಕರಣಗಳಿಂದ ಕಪ್ಪು ಚುಕ್ಕೆಗಳು ಬಿದ್ದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
2018ರಲ್ಲಿ ಕ್ರಿಕೆಟ್ ನಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಗಳು ಆಗಿಲ್ಲ. ಆದರೆ ಸ್ಯಾಂಡ್ ಪೇಪರ್, MeToo ನಂತಹ ಕೆಲ ಪ್ರಕರಣಗಳಿಂದ ಕಪ್ಪು ಚುಕ್ಕೆಗಳು ಬಿದ್ದಿವೆ. 
ಸ್ಯಾಂಡ್ ಪೇಪರ್ ಪ್ರಕರಣ
ಸ್ಯಾಂಡ್ ಪೇಪರ್ ಪ್ರಕರಣದಿಂದ ಆಸ್ಟ್ರೇಲಿಯಾ ತಲೆ ಬಗ್ಗಿಸುವಂತಾ ಪರಿಸ್ಥಿತಿ ನಿರ್ಮಾಣವಾಯಿತು. ಕ್ರೀಡಾಸ್ಫೂರ್ತಿ ಮರೆತು ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು ಎಂಬ ದುರುದ್ದೇಶದಿಂದ ಆಸ್ಟ್ರೇಲಿಯಾದ ಅಂದಿನ ನಾಯಕ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ ತಲೆದಂಡವಾಯಿತು. ಬಳಿಕ ತಮ್ಮ ತಪ್ಪಿನ ಅರಿವಾಗಿ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸುದ್ಧಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದರು. ಒಟ್ಟಿನಲ್ಲಿ ಎದುರಾಳಿ ತಂಡದ ಮೇಲೆ ಸ್ಲೆಡ್ಜಿಂಗ್ ದಾಳಿ ನಡೆಸುತ್ತಿದ್ದ ಆಸ್ಟ್ರೇಲಿಯನ್ನರು ಇದೀಗ ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿತ್ತು ಮುಖಭಂಗಕ್ಕೀಡಾಯಿತು.
ಅಭಿಮಾನಿ ವಿರುದ್ಧ ತಿರುಗಿಬಿದ್ದ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಹೆಚ್ಚು ಶ್ರಮ ಹಾಕುತ್ತಾರೆ. ಹೀಗಾಗಿ ನನಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಗಳು ಎಂದರೆ ಇಷ್ಟ ಎಂದು ಅಭಿಮಾನಿಯೊಬ್ಬ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿರಾಟ್ ಆ ಅಭಿಮಾನಿಗೆ ದೇಶ ಬಿಟ್ಟು ಹೋಗು ಎಂದು ರೀಟ್ವೀಟ್ ಮಾಡಿದ್ದರು. ಇದು ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕ ಬಿಸಿಸಿಐ ಅಭಿಮಾನಿಗಳ ಜತೆ ವಿನಯವಾಗಿ ವರ್ತಿಸುವಂತೆ ಸೂಚಿಸಿತ್ತು.
ಮಿಥಾಲಿ ವಿರುದ್ಧ ಪವಾರ್ ಬಾಂಬ್
ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಮಿಥಾಲಿ ರಾಜ್ ಬ್ಲಾಕ್ ಮೇಲ್ ಹಾಗೂ ಒತ್ತಡ ತಂತ್ರವನ್ನು ಕೋಚ್ ಗಳ ಮೇಲೆ ಹೇರುವುದನ್ನು ನಿಲ್ಲಿಸಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿ ಮುಖ್ಯ ಎಂಬುದನ್ನು ಮನಗಾಣಬೇಕು ಎಂದು ಮಹಿಳಾ ತಂಡದ ಕೋಚ್ ರಮೇಶ್ ಪವಾರ್ ಮಿಥಾಲಿ ರಾಜ್ ವಿರುದ್ಧ ಬಾಂಬ್ ಸಿಡಿಸಿದ್ದರು. ಇದರಿಂದಾಗಿ ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಏನು ಸರಿ ಇಲ್ಲ ಎಂಬುದು ಜಗಜ್ಜಾಹೀರಾಯಿತು. ನಂತರ ಮಿಥಾಲಿ ಸಹ ರಮೇಶ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು ಕೊನೆಗೆ ಬಿಸಿಸಿಐ ಕೋಚ್ ಹುದ್ದೆಯಿಂದ ರಮೇಶ್ ಪವಾರ್ ಗೆ ಕೊಕ್ ನೀಡುವ ಮೂಲಕ ಜಗಳಕ್ಕೆ ಅಂತ್ಯವಾಡಿದ್ದರು.
ಬಿಸಿಸಿಐಗೂ ತಟ್ಟಿದ ಮೀಟೂ
ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಮೀಟೂ ಅಭಿಯಾನ ನಂತರ ಬಿಸಿಸಿಐಗೂ ತಟ್ಟಿತ್ತು. ಹೌದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಿಇಒ ರಾಹುಲ್ ಜೊಹ್ರಿ ವಿರುದ್ಧ ಪತ್ರಕರ್ತೆಯೊಬ್ಬರು ಮೀಟೂ ಬಾಂಬ್ ಸಿಡಿಸಿದ್ದರು. ನಂತರ ಪ್ರಕರಣ ತನಿಖೆ ನಡೆಸಿದ್ದ ಮೂವರು ಸದಸ್ಯರ ಆಡಳಿತಗಾರರ ಸಮಿತಿಯು ಜೊಹ್ರಿಗೆ ಕ್ಲೀನ್ ಚಿಟ್ ನೀಡಿತ್ತು.
ಗ್ಲಾಸ್ ಹೊಡೆದ ಬಾಂಗ್ಲಾ ಆಟಗಾರರು
ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆದ್ದ ಖುಷಿಯಲ್ಲಿ ಬಾಂಗ್ಲಾದೇಶದ ಆಟಗಾರರು ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಡ್ರೆಸ್ಸಿಂಗ್ ರೂಂನ ಗ್ಲಾಸ್ ಹೊಡೆದಿದ್ದರು. ಈ ಕೃತ್ಯದಲ್ಲಿ ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಸಹ ಭಾಗಿಯಾಗಿದ್ದು ನಂತರ ಆತನಿಗೆ ದಂಡ ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com