ಸಂಗ್ರಹ ಚಿತ್ರ
ಕ್ರಿಕೆಟ್
ಐಸಿಸಿ ವರ್ಷದ ಮಹಿಳಾ ತಂಡ: ಏಕದಿನಕ್ಕೆ ಕಿವೀಸ್ ನ ಸುಜಿಬೇಟ್ಸ್, ಟಿ20ಗೆ ಭಾರತದ ಹರ್ಮನ್ ಪ್ರೀತ್ ಕೌರ್ ನಾಯಕಿ
ಐಸಿಸಿ ತನ್ನ ವರ್ಷದ ಕನಸಿನ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಏಕದಿನ ತಂಡಕ್ಕೆ ನ್ಯೂಜಿಲೆಂಡ್ ನಾಯಕಿ ಸುಜಿಬೇಟ್ಸ್ ಹಾಗೂ ಟಿ20 ತಂಡಕ್ಕೆ ಭಾರತದ ಚುಟುಕು ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ತನ್ನ ವರ್ಷದ ಕನಸಿನ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಏಕದಿನ ತಂಡಕ್ಕೆ ನ್ಯೂಜಿಲೆಂಡ್ ನಾಯಕಿ ಸುಜಿಬೇಟ್ಸ್ ಹಾಗೂ ಟಿ20 ತಂಡಕ್ಕೆ ಭಾರತದ ಚುಟುಕು ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್ ತಂಡವನ್ನು ಐಸಿಸಿ ಪ್ರಕಟಿಸಿದ್ದು, ಏಕದಿನ ತಂಡಕ್ಕೆ ನ್ಯೂಜಿಲೆಂಡ್ ತಂಡದ ನಾಯಕಿ ಸುಜಿಬೇಟ್ಸ್ ನಾಯಕಿಯಾಗಿದ್ದಾರೆ. ಉಳಿದಂತೆ ತಂಡದಲ್ಲಿ ಕನಸಿನ ತಂಡದ ಆರಂಭಿಕ ಆಟಗಾರ್ತಿಯಾಗಿ ಭಾರತದ ಸ್ಮೃತಿ ಮಂದಾನ ಮತ್ತು ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ್ತಿ ಟ್ಯಾಮಿ ಬ್ಯೂಮೊಂಟ್ ಆಯ್ಕೆಯಾಗಿದ್ದಾರೆ. ಎರಡು ಮತ್ತು 3ನೇ ಕ್ರಮಾಂಕಕ್ಕೆ ನಾಯಕಿ ಸುಜಿ ಬೇಟ್ಸ್ ಮತ್ತು ದಕ್ಷಿಣ ಆಫ್ರಿಕಾದ ಡೇನ್ ವ್ಯಾನ್ ನಿಕೆರ್ಕ್ ಆಯ್ಕೆಯಾಗಿದ್ದಾರೆ.
ಉಳಿದಂತೆ ಐಸಿಸಿ ಏಕದಿನ ಮಹಿಳಾ ಕನಸಿನ ತಂಡ ಇಂತಿದೆ.
ಸ್ಮೃತಿ ಮಂದಾನ (ಭಾರತ)
ಟ್ಯಾಮಿ ಬ್ಯೂಮೊಂಟ್ (ಇಂಗ್ಲೆಂಡ್)
ಸುಜಿ ಬೇಟ್ಸ್ (ನಾಯಕಿ) (ನ್ಯೂಜಿಲೆಂಡ್)
ಡೇನ್ ವ್ಯಾನ್ ನಿಕೆರ್ಕ್ (ದಕ್ಷಿಣ ಆಫ್ರಿಕಾ)
ಸೋಫಿ ಡೆವೈನ್ (ನ್ಯೂಜಿಲೆಂಡ್)
ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)
ಮರಿಝನ್ನೆ ಕಾಪ್ (ದಕ್ಷಿಣ ಆಫ್ರಿಕಾ)
ದೀಂದ್ರ ಡೊಟ್ಟಿನ್ (ವೆಸ್ಟ್ ಇಂಡೀಸ್)
ಸನಾ ಮೀರ್ (ಪಾಕಿಸ್ತಾನ)
ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್)
ಪೂನಂ ಯಾದವ್ (ಭಾರತ)
ಇನ್ನು ಐಸಿಸಿಯ ಕನಸಿನ ಮಹಿಳಾ ಟಿ20 ತಂಡ ಕೂಡ ಪ್ರಕಟವಾಗಿದ್ದು, ಟಿ20 ತಂಡಕ್ಕೆ ಭಾರತದ ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿದ್ದಾರೆ. ಐಸಿಸಿ ಕನಸಿನ ಟಿ20 ತಂಡ ಇಂತಿದೆ.
ಸ್ಮೃತಿ ಮಂದಾನ (ಭಾರತ)
ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)
ಸುಜಿ ಬೇಟ್ಸ್ (ನ್ಯೂಜಿಲೆಂಡ್)
ಹರ್ಮನ್ ಪ್ರೀತ್ ಕೌರ್ (ನಾಯಕಿ) (ಭಾರತ)
ಲೀ ಕ್ಯಾಸ್ಪೆರೆಕ್ (ನ್ಯೂಜಿಲೆಂಡ್)
ಮೇಗನ್ ಸ್ಕಟ್ (ಆಸ್ಟ್ರೇಲಿಯಾ)
ನಟಾಲಿಯಾ ಸಿವರ್ (ಇಂಗ್ಲೆಂಡ್)
ಎಲ್ಲೈಸ್ ಪೆರ್ರಿ (ಆಸ್ಟ್ರೇಲಿಯಾ)
ಆಶ್ಲೇ ಗಾರ್ಡ್ನರ್ (ಆಸ್ಟ್ರೇಲಿಯಾ)
ಪೂನಂ ಯಾದವ್ (ಭಾರತ)
Congratulations to the ICC Women’s ODI Team of the Year 2018!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ