ತ್ರಿಬಲ್ ಧಮಾಕಾ; ಸ್ಮೃತಿ ಮಂದಾನಾ ಮುಡಿಗೇರಿದ ರಾಚೆಲ್ ಹೆಯ್ಹೋ-ಫ್ಲಿಂಟ್, ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ತನ್ನ ಮಹಿಳಾ ಕ್ರಿಕೆಟ್ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಮೂರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ತನ್ನ ಮಹಿಳಾ ಕ್ರಿಕೆಟ್ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಮೂರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸ್ಮೃತಿ ಮಂದಾನಾ ಐಸಿಸಿಯ ರಾಚೆಲ್ ಹೆಯ್ಹೋ-ಫ್ಲಿಂಟ್ ಪ್ರಶಸ್ತಿಯೊಂದಿಗೆ, ಐಸಿಸಿ ಏಕದಿನ ಆಟಗಾರ್ತಿ ಮತ್ತು ಐಸಿಸಿ ವರ್ಷದ ಆಟಗಾರ್ತಿ ಎಂಬ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ ತಂಡ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಐಸಿಸಿ ಟಿ20 ವರ್ಷದ ಆಟಗಾರ್ತಿ ಪ್ರಶಸ್ತಿ ಮತ್ತು ಇಂಗ್ಲೆಂಡ್ ತಂಡದ ಸೋಫಿ ಎಕ್ಲೆಸ್ಟೋನ್ ಅವರು ಐಸಿಸಿ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಗೆದ್ದ ಕುರಿತು ಪ್ರತಿಕ್ರಿಯಿಸಿರುವ ಮಂದಾನ, ಯಾವುದೇ ಆಟಗಾರ್ತಿಯರಾದರೂ ತಂಡದ ಗೆಲುವಿಗಾಗಿ ಆಡುತ್ತಾರೆ. ಆದರೆ ನಮ್ಮ ಶ್ರಮದಿಂದ ತಂಡ ಗೆದ್ದಾಗ ಮತ್ತು ನಮ್ಮ ಶ್ರಮವನ್ನು ಗುರುತಿಸಿ ಇಂತಹ ಪ್ರಶಸ್ತಿಗಳು ನಮ್ಮನ್ನು ಅರಸಿ ಬಂದಾಗಿ ತುಂಬಾ ಖುಷಿಯಾಗುತ್ತದೆ ಮತ್ತು ಮತ್ತಷ್ಟು ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಸ್ಪೂರ್ತಿ ಮತ್ತು ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com