ಭಾರತ-ಆಫ್ರಿಕಾ ಏಕದಿನ ಸರಣಿ: ಎಬಿಡಿ, ಡುಪ್ಲೇಸಿಸ್ ಬಳಿಕ ಡಿ ಕಾಕ್ ಸಹ ಆಫ್ರಿಕಾ ತಂಡದಿಂದ ಔಟ್!

ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಇದೀಗ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ...
ಎಬಿಡಿ ವಿಲಿಯರ್ಸ್, ಡುಪ್ಲೇಸಿಸ್, ಕ್ವಿಂಟನ್ ಡಿ ಕಾಕ್
ಎಬಿಡಿ ವಿಲಿಯರ್ಸ್, ಡುಪ್ಲೇಸಿಸ್, ಕ್ವಿಂಟನ್ ಡಿ ಕಾಕ್
ಕೇಪ್ ಟೌನ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಇದೀಗ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಗಾಯಗೊಂಡು ತಂಡದಿಂದ ಹೊರಗುಳಿದರು. ನಂತರ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡು ನಾಯಕ ಡುಪ್ಲೇಸಿಸ್ ಸಹ ತಂಡದಿಂದ ದೂರ ಉಳಿದಿದ್ದು ಆಫ್ರಿಕಾ ತಂಡಕ್ಕೆ ತುಂಬಲಾರದ ದೊಡ್ಡ ನಷ್ಟ ಉಂಟಾಗಿತ್ತು. 
ತಂಡದಲ್ಲಿ ಸ್ಟಾರ್ ಆಟಗಾರರ ಕೊರತೆಯಿಂದಾಗಿ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಫ್ರಿಕಾ ತಂಡ 118 ರನ್ ಗಳ ಅಲ್ಪಮೊತ್ತಕ್ಕೆ ಆಲೌಟ್ ಆಗಿ ಟೀಂ ಇಂಡಿಯಾ ವಿರುದ್ಧ 9 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿತ್ತು. 
ಎರಡನೇ ಏಕದಿನ ಪಂದ್ಯದಲ್ಲಿ ಇದೀಗ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಸಹ ಗಾಯಗೊಂಡಿದ್ದಾರೆ. ಇದರಿಂದಾಗಿ ಮುಂಬರುವ ನಾಲ್ಕು ಏಕದಿನ ಪಂದ್ಯ ಮತ್ತು ಟಿ20 ಸರಣಿಯಿಂದ ಡಿ ಕಾಕ್ ದೂರ ಉಳಿಯಲಿದ್ದು ಇದು ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. 
ಸದ್ಯ ಆಫ್ರಿಕಾ ಕ್ರಿಕೆಟ್ ಮಂಡಿಳಿ ಡಿ ಕಾಕ್ ಗೆ ಬದಲಿ ಆಟಗಾರರನ ಹೆಸರನ್ನು ಘೋಷಿಸಿಲ್ಲ. ಆದರೆ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಹೆನ್ರಿಕ್ ಕ್ಲೇಸೆನ್ ಅವರನ್ನು ಅದಾಗಲೇ ತಂಡಕ್ಕೆ ಸೇರಿಸಿಕೊಂಡಿರುವುದರಿಂದ ಟೀಂ ಇಂಡಿಯಾ ವಿರುದ್ಧ ಮುಂಬರುವ ಮೂರನೇ ಪಂದ್ಯದಿಂದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿದ್ದಾರೆ. 
ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಡರ್ಬನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಜಯಗಳಿಸಿತ್ತು. ಇನ್ನು ನಿನ್ನೆ ಸೆಂಚೂರಿಯನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಜಯ ಗಳಿಸಿ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com