2018ರ ಐಪಿಎಲ್ ಹರಾಜು: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ!

2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಹರಾಜು 46.60 ಕೋಟಿ ವೀಕ್ಷಣೆಗೆ ಒಳಗಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ತಿಳಿಸಿದೆ...
ಐಪಿಎಲ್
ಐಪಿಎಲ್
ಮುಂಬೈ: 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಹರಾಜು 46.60 ಕೋಟಿ ವೀಕ್ಷಣೆಗೆ ಒಳಗಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ತಿಳಿಸಿದೆ. 
ಕಳೆದ ವರ್ಷಕ್ಕಿಂತ ಇದು ಆರು ಪಟ್ಟು ಹೆಚ್ಚಳವಾಗಿದೆ. ಟಿವಿ, ಡಿಜಿಟಲ್ ಹಾಗೂ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳಿಂದ ಇಷ್ಟು ಪ್ರಮಾಣದ ವೀಕ್ಷಣೆ ದಾಖಲಾಗಿದೆ ಎಂದು ಸಂಸ್ಥೆ ಹೇಳಿದೆ. 
ಜಗತ್ತಿನ ಶ್ರೀಮಂತ ಟಿ20 ಲೀಗ್ ಐಪಿಎಲ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಬೊಕ್ಕಸವನ್ನು ತುಂಬುತ್ತಿರುವ ಜತೆ ಜತೆಗೆ ತೆರಿಗೆ ರೂಪದಲ್ಲಿ ದೊಡ್ಡ ಮೊತ್ತವನ್ನು ಕಳೆದುಕೊಳ್ಳುತ್ತಿದೆ. 
ಅಂದಾಜಿನ ಪ್ರಕಾರ 2008ರಲ್ಲಿ ಆರಂಭವಾದ ಐಪಿಎಲ್ 10 ವರ್ಷಗಳ ಅಂತ್ಯಕ್ಕೆ ಬರೋಬ್ಬರಿ 3500 ಕೋಟಿ ರುಪಾಯಿಯನ್ನು ಆದಾಯ ತೆರಿಗೆ ಇಲಾಖೆಗೆ ಕಟ್ಟಿದೆ. ವಾರ್ಷಿಕವಾಗಿ ನಡೆಯುವ ಈ ಟೂರ್ನಿ ಸಂಪೂರ್ಣವಾಗಿ ಕಮರ್ಷಿಯಲ್ ಎಂದಿದ್ದ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಲು ನಿರಾಕರಿಸಿತ್ತು. 
ಕಳೆದ 10 ಆವೃತ್ತಿಗಳಿಂದ ಬಿಸಿಸಿಐಗೆ ಬಂದ ಆದಾಯ 12 ಸಾವಿರ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com