ವಿಕೆಟ್ ಪಡೆದ ಸಂಭ್ರಮದಲ್ಲಿ ಆಫ್ರಿಕಾ ಆಟಗಾರರು
ವಿಕೆಟ್ ಪಡೆದ ಸಂಭ್ರಮದಲ್ಲಿ ಆಫ್ರಿಕಾ ಆಟಗಾರರು

ಭಾರತದ ಬಳಿಕ ಆಫ್ರಿಕನ್ ಬೌಲರ್ ಗಳ ಮೆರೆದಾಟ; ಮೊದಲ ದಿನದಾಟದ ಅಂತ್ಯಕ್ಕೆ ಭಾರತ 28ಕ್ಕೆ 3 ವಿಕೆಟ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡದ ಬೌಲರ್ ಗಳು ಮೆರೆದಾಡಿದ್ದು, ಭಾರತೀಯ ಬ್ಯಾಟ್ಸಮನ್ ಗಳನ್ನು ಆಫ್ರಿಕನ್ ಬೌಲರ್ ಗಳು ಕಾಡಿದರು.
ಕೇಪ್ ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡದ ಬೌಲರ್ ಗಳು ಮೆರೆದಾಡಿದ್ದು, ಭಾರತೀಯ ಬ್ಯಾಟ್ಸಮನ್ ಗಳನ್ನು ಆಫ್ರಿಕನ್ ಬೌಲರ್ ಗಳು ಕಾಡಿದರು.
ದಿನದಾಟದ ಅಂತ್ಯಕ್ಕೆ ಇನ್ನು 16 ಓವರ್ ಗಳು ಬಾಕಿ ಇರುವಂತೆ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಆಫ್ರಿಕಾದ ಸ್ಟೇಯ್ನ್, ಮಾರ್ಕೆಲ್ ಮತ್ತು ಫಿಲಾಂಡರ್ ಶಾಕ್ ನೀಡಿದರು. ಮೊದಲು ಇನ್ನಿಂಗ್ಸ್ ನ 5ನೇ ಓವರ್  ನಲ್ಲೇ ಮುರಳಿ ವಿಜಯ್ ಫಿಲಾಂಡರ್ ವಿಕೆಟ್ ಒಪ್ಪಿಸಿದರೆ, ಮುಂದಿನ ಓವರ್ ನಲ್ಲೇ ಶಿಖರ್ ಧವನ್ ಡೇಲ್ ಸ್ಟೇಯ್ನ್ ಕ್ಯಾಚ್ ನೀಡಿ ಹೊರನಡೆದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಬಂದಷ್ಟೇ ವೇಗವಾಗಿ ಕೇವಲ 5 ರನ್ ಗಳಿಸಿ  ಮಾರ್ಕೆಲ್ ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಭಾರತ ತಂಡ ದಿನದಾಟದ ಅಂತ್ಯಕ್ಕೆ 28 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಇನ್ನು 5 ರನ್ ಗಳಿಸಿ ಚೇತೇಶ್ವರ ಪೂಜಾರಾ ಹಾಗೂ ಖಾತೆ ತೆರೆಯದ ರೋಹಿತ್ ಶರ್ಮಾ ಕ್ರೀಸ್ ನಲ್ಲಿ ಇದ್ದಾರೆ. ಆಫ್ರಿಕಾ ಪರ  ಸ್ಟೇಯ್ನ್, ಮಾರ್ಕೆಲ್ ಮತ್ತು ಫಿಲಾಂಡರ್ ಗೆ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ಕೇವಲ 286 ರನ್ ಗಳಿಗೆ ಆಲ್ ಔಟ್ ಆಗಿತ್ತು. ಭಾರತ ಭುವನೇಶ್ವರ್ ಕುಮಾರ್ 4 ಮತ್ತು ಅಶ್ವಿನ್ 2 ವಿಕೆಟ್ ಪಡೆದು ದಿನದ ಯಶಸ್ವೀ ಬೌಲರ್ ಗಳೆನಿಸಿಕೊಂಡರು. ಅಂತೆಯೇ   ಶಮಿ, ಬುಮ್ರಾ ಮತ್ತು ಪಾಂಡ್ಯಾ ತಲಾ 1 ವಿಕೆಟ್ ಪಡೆದರು.
2ನೇ ದಿನದಾಟ ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿಲಿದೆ.

Related Stories

No stories found.

Advertisement

X
Kannada Prabha
www.kannadaprabha.com