ಕ್ರಿಕೆಟ್
ಸರಣಿ ನಿರ್ಣಯ ಪಂದ್ಯ: ಅಲ್ಪಮೊತ್ತಕ್ಕೆ ಟೀಂ ಇಂಡಿಯಾವನ್ನು ಕಟ್ಟಿಹಾಕಿದ ಇಂಗ್ಲೆಂಡ್
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 256 ರನ್ ಗಳನ್ನು ಪೇರಿಸಿದೆ...
ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 256 ರನ್ ಗಳನ್ನು ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. 2 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಔಟ್ ಆಗಿ ಪೆವಿಲಿಯನ್ ಸೇರಿದರು. ಇಂಗ್ಲೆಂಡ್ ಬೌಲರ್ ಗಳ ನಿಖರ ಬೌಲಿಂಗ್ ದಾಳಿಯಿಂದ ಟೀಂ ಇಂಡಿಯಾ 256 ರನ್ ಗಳಿಗೆ ಆಲೌಟ್ ಆಗಿದ್ದು ಇಂಗ್ಲೆಂಡ್ ತಂಡಕ್ಕೆ 257 ರನ್ ಗಳ ಗುರಿ ನೀಡಿದೆ.
ಭಾರತ ಪರ ರೋಹಿತ್ ಶರ್ಮಾ 2, ಶಿಖರ್ ಧವನ್ 44, ವಿರಾಟ್ ಕೊಹ್ಲಿ 71, ದಿನೇನ್ ಕಾರ್ತಿಕ್ 21, ಎಂಎಸ್ ಧೋನಿ 42, ಭುವನೇಶ್ವರ್ ಕುಮಾರ್ 21 ಹಾಗೂ ಶಾರ್ದೂಲ್ ಠಾಕೂರ್ ಅಜೇಯ 22 ರನ್ ಬಾರಿಸಿದ್ದಾರೆ.
ಇಂಗ್ಲೆಂಡ್ ಪರ ರಶೀದ್ ಅದಿಲ್ ರಶೀದ್ ಮತ್ತು ವಿಲ್ಲಿ ತಲಾ 3 ವಿಕೆಟ್ ಹಾಗೂ ವೂಡ್ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ