ಬೆಂಗಳೂರು: ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನವೊಂದನ್ನು ಶುರು ಮಾಡಿದ್ದು ಈ ಅಭಿಯಾನದಲ್ಲಿ ಸ್ಟಾರ್ ನಟರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಫಿಟ್ನೆಸ್ ಚಾಲೆಂಜ್ ಅನ್ನು ಸ್ವೀಕರಿಸಿದ್ದರು. ಇದೀಗ ಕ್ರಿಕೆಟಿಗ ಕನ್ನಡಿಗ ವಿನಯ್ ಕುಮಾರ್ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಅನ್ನು ಸ್ಯಾಂಡಲ್ವುಡ್ ನಟ ಕಿಚ್ಚಾ ಸುದೀಪ್ ಸ್ವೀಕರಿಸಿದ್ದಾರೆ.