ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಕಟ: ವಿರಾಟ್ ಕೊಹ್ಲಿಗೆ ವರ್ಷದ ಕ್ರಿಕೆಟಿಗ ಗೌರವ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ತೋರಿದ್ದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಾರಣ ಬಿಸಿಸಿಐ ವರ್ಷದ ಕ್ರಿಕೆಟಿಗರಿಗೆ ನಿಡಲಾಗುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ....
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ತೋರಿದ್ದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಾರಣ ಬಿಸಿಸಿಐ ವರ್ಷದ ಕ್ರಿಕೆಟಿಗರಿಗೆ ನಿಡಲಾಗುವ ಪ್ರತಿಷ್ಠಿತ  ಪಾಲಿ ಉಮ್ರಿಗರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಹಿಳಾ ವಿಶ್ವಕಪ್ ತಾರೆಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಅವರಿಗೆ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಲಿದೆ.
2016-17 ಹಾಗೂ 2017-18 ವರ್ಷದಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಜೂನ್ 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ ಎಂದು ಬಿಸಿಸಿಐ ಪ್ರಕಟಣೆ ಹೇಳಿದೆ.
2016-17ನೇ ಸಾಲಿನಲ್ಲಿ ಕೊಹ್ಲಿ 13 ಟೆಸ್ಟ್ ಪಂದ್ಯಗಳಲ್ಲಿ 74ರ ಸರಾಸರಿಯಲ್ಲಿ 1332 ರನ್ , 27 ಏಕದಿನಗಳಲ್ಲಿ 84.22ರ ಸರಾಸರಿಯಲ್ಲಿ 1516 ರನ್ ಗಳಿಸಿದ್ದಾರೆ. 2017-18ರ ಸಾಲಿನಲ್ಲಿ 89.6ರ ಸರಾಸರಿಯಲ್ಲಿ 896 ರನ್ ಗಳಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಕೊಹ್ಲಿ ಪ್ರಶಸ್ತಿ ಫಲಕ್ದೊಡನೆ 15 ಲಕ್ಷ ರೂ ನಗದು ಬಹುಮಾನ ಪಡೆಯಲಿದ್ದಾರೆ. ಮಹಿಳಾ ವಿಭಾಗದಲ್ಲಿ 2016-17ರ ಸಾಲಿನಲ್ಲಿ ಹರ್ಮನ್‌ಪ್ರೀತ್ ಕೌರ್ ಹಾಗೂ 2017-18ನೇ ಸಾಲಿನಲ್ಲಿ ಸ್ಮೃತಿ ಮಂಧಾನಾ ಸಮಾನ ಗೌರವ ಪಡೆಯಲಿದ್ದಾರೆ.
ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಸ್ಮರಣಾರ್ಥ ನಾಲ್ಕು ಪ್ರಶಸ್ತಿಗಳನ್ನು ಸ್ಥಾಪಿಸಿರುವ ಬಿಸಿಸಿಐ 16 ವರ್ಷದವರೊಳಗಿನ ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಸ್ಕೋರರ್ ಹಾಗೂ ವಿಕೆಟ್ ಗಳಿಸಿದ ಆಟಗಾರರ ಜತೆಗೆ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಜೂನಿಯರ್ ಹಾಗೂ ಹಿರಿಯ ಆಟಗಾರ್ತಿಯರಿಗೆ ಜಗಮೋಹನ್ ದಾಲ್ಮಿಯಾ ಟ್ರೋಫಿ ನಿಡಲು ತೀರ್ಮಾನಿಸಿದೆ.
ಬಂಗಾಳ ಕ್ರಿಕೆಟ್ ಸಂಸ್ಥೆ ಮತ್ತು ದಿಲ್ಲಿ ಕ್ರಿಕೆಟ್ ಸಂಸ್ಥೆಗಳು  ಕ್ರಮವಾಗಿ 016-17 ಮತ್ತು 2017-18ನೇ ಸಾಲಿನ  ಅತ್ಯುತ್ತಮ ರಾಜ್ಯ ಸಂಸ್ಥೆ ಗೌರವಕ್ಕೆ ಭಾಜನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com