ಟಿ20 ರ‍್ಯಾಂಕಿಂಗ್‌: ಪಾಕಿಸ್ತಾನದ ಅಗ್ರ ಸ್ಥಾನಕ್ಕೆ ಭಾರತ, ಇಂಗ್ಲೆಂಡ್, ಆಸಿಸ್ ನಿಂದ ಕುತ್ತು?

ಮುಂದಿನ ಎರಡು ವಾರಗಳಲ್ಲಿ ಟಿ20 ರ‍್ಯಾಂಕಿಂಗ್‌ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಪಾಕಿಸ್ತಾನದ ಅಗ್ರ ಸ್ಥಾನಕ್ಕೆ ಭಾರತ, ಇಂಗ್ಲೆಂಡ್ ಹಾಗೂ ಆಸಿಸ್ ನಿಂದ ಕುತ್ತು ಎದುರಾಗುವ ಸಾಧ್ಯತೆ ಇದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ದುಬೈ: ಮುಂದಿನ ಎರಡು ವಾರಗಳಲ್ಲಿ ಟಿ20 ರ‍್ಯಾಂಕಿಂಗ್‌ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಪಾಕಿಸ್ತಾನದ ಅಗ್ರ ಸ್ಥಾನಕ್ಕೆ ಭಾರತ, ಇಂಗ್ಲೆಂಡ್ ಹಾಗೂ ಆಸಿಸ್ ನಿಂದ ಕುತ್ತು ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುಂದಿನ ಪಂದ್ಯಗಳು ನಿರ್ಣಾಯಕವಾಗಲಿವೆ.
ಪ್ರಸ್ತುತ ಪಾಕಿಸ್ತಾನ ನಂಬರ್ 1 ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡು ಹಾಗೂ ಭಾರತ ಕ್ರಮವಾಗಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯಗಳನ್ನು ಆಧರಿಸಿದ  ಎಂಆರ್ ಎಫ್  ಟೈರ್ಸ್  ಐಸಿಸಿ ಟಿ-20 ರ‍್ಯಾಂಕಿಂಗ್‌  ಪ್ರಕಟಗೊಳ್ಳಲಿದೆ.
ಪಾಕಿಸ್ತಾನ 131 ಅಂಕಗಳನ್ನು ಪಡೆಯುವುದರೊಂದಿಗೆ  ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು,  ಜುಲೈ1ರಿಂದ 8 ರವರೆಗೂ ಹರಾರೆಯಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಮೂರು ಟಿ-20 ಪಂದ್ಯಗಳನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ.
ಆದರೆ, ಪಾಕಿಸ್ತಾನಕ್ಕಿಂತ ಐದು ಅಂಕ ಕಡಿಮೆ ಹೊಂದಿರುವ ಆಸ್ಟ್ರೇಲಿಯಾ ಐಸಿಸಿ ಕ್ರಿಕೆಟ್  ವಿಶ್ವಕಪ್ ಟೂರ್ನಿಯಲ್ಲಿ  ಉತ್ತಮ ಪ್ರದರ್ಶನ ತೋರಿದ್ದರೆ ಪಾಕಿಸ್ತಾನವನ್ನು ಕೆಳಗೆ ತಳ್ಳಲು ಅವಕಾಶ ಇರುತ್ತದೆ ಎಂದು ಐಸಿಸಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಂಗ್ಲೆಂಡ್ ವಿರುದ್ಧದ  ಪಂದ್ಯದ ಫಲಿತಾಂಶ ಕೂಡಾ ಆಸ್ಟ್ರೇಲಿಯಾದ ಮೇಲೆ ಪರಿಣಾಮ ಬೀರಲಿದೆ. ಪಾಕಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಪಾಕಿಸ್ತಾನದಿಂದ ನಂಬರ್ 1 ಸ್ಥಾನವನ್ನು ಸುಲಭವಾಗಿ ಕಬಳಿಸಬಹುದಾಗಿದೆ.
ಪಾಕಿಸ್ತಾನ ಹೊರತುಪಡಿಸಿ ಜಿಂಬಾಬ್ವೆ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದರೂ ಪಾಕಿಸ್ತಾನದ ಸನ್ನಿಹದಲ್ಲಿ  ನಿಲ್ಲಬಹುದಾಗಿದೆ. ಆಸ್ಟ್ರೇಲಿಯಾ ನಾಲ್ಕು ಲೀಗ್ ಪಂದ್ಯಗಳನ್ನು ಗೆದ್ದು, ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಸೋಲಿಸಿದ್ದರೆ   137 ಅಂಕಗಳನ್ನು ಪಡೆಯಬಹುದಾಗಿದೆ.  ಪಾಕಿಸ್ತಾನ ಕೂಡಾ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದು, ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ 136 ಅಂಕಗಳನ್ನು ಪಡೆಯಲಿದೆ.
ಜಿಂಬಾಬ್ವೆ ಪ್ರಸ್ತುತ 12 ನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರೆ ಸ್ಕಾಟ್ ಲ್ಯಾಂಡ್  ನ್ನು ಮೀರಿಸಬಹುದಾಗಿದೆ.  ಭಾರತ  ಇಂಗ್ಲೆಂಡ್ ಹಾಗೂ ಐರ್ ಲ್ಯಾಂಡ್ ವಿರುದ್ಧ ಐದು ಪಂದ್ಯಗಳನ್ನು ಗೆದ್ದರೆ 127 ಅಂಕಗಳನ್ನು ಗಳಿಸಬಹುದಾಗಿದೆ.
ಮತ್ತೊಂದೆಡೆ  ಇಂಗ್ಲೆಂಡ್ , ಆಸ್ಟ್ರೇಲಿಯಾ ಮತ್ತು ಭಾರತವನ್ನು 3-0 ಅಂತರದಿಂದ ಸೋಲಿಸಿದ್ದರೆ 126 ಅಂಕಗಳನ್ನು ಪಡೆಯಬಹುದಾಗಿದೆ. ಒಂದು ವೇಳೆ ಜಿಂಬಾಬ್ವೆ ಮೂರು ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾದ್ದಲಿ ಭಾರತ ಅಥವಾ ಇಂಗ್ಲೆಂಡ್  ಅಗ್ರ ಸ್ಥಾನಕ್ಕೆ ತಲುಪಬಹುದಾಗಿದೆ. ಐರ್ ಲ್ಯಾಂಡ್ ಪ್ರಸ್ತುತ 17 ನೇ ಸ್ಥಾನದಲ್ಲಿದೆ . ಒಂದು ವೇಳೆ ಭಾರತ ವಿರುದ್ಧ ಒಂದು ಪಂದ್ಯ ಗೆದ್ದರೆ 15 ನೇ ಸ್ಥಾನಕ್ಕೆ ಏರಲಿದೆ.
ಬ್ಯಾಟ್ಸ್ ಮನ್  ಪಟ್ಟಿ  ಎಂಆರ್ ಎಫ್ ಟೈರ್ಸ್ ಟಿ-20  ಬ್ಯಾಟ್ಸ್ ಮನ್  ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಂ  ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ  ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಆರೊನ್  ಪಿಂಚ್  ಮೂರು ಹಾಗೂ ನಾಲ್ಕನೇ ಸ್ಛಾನದಲ್ಲಿದ್ದಾರೆ.  ಭಾರತದ ನಾಯಕ ವಿರಾಟ್ ಕೊಹ್ಲಿ 8 ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಬೌಲಿಂಗ್ ವಿಭಾಗ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com