ಕೊಲಂಬೊ: ನಿಡಹಾಸ್ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ತಂಡದ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದಾರೆ.
ಕೊಲಂಬೊದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತೆ ವೈಫಲ್ಯ ಅನುಭವಿಸಿದ್ದು ಶೂನ್ಯಕ್ಕೆ ಔಟಾಗಿದ್ದಾರೆ.
ಸದ್ಯ ಟೀಂ ಇಂಡಿಯಾ 8 ಓವರ್ ಮುಕ್ತಾಯಕ್ಕೆ ಪ್ರಮುಖ 2 ವಿಕೆಟ್ ಕಳೆದುಕೊಂಡು 57 ರನ್ ಪೇರಿಸಿದೆ. ರೋಹಿತ್ ಶರ್ಮಾ 0, ಸುರೇಶ್ ರೈನಾ 1 ರನ್ ಗೆ ಔಟಾಗಿದ್ದಾರೆ. 29 ರನ್ ಗಳಿಸಿ ಧವನ್ ಮತ್ತು 21 ರನ್ ಗಳಿಸಿ ಮನೀಶ್ ಪಾಂಡೆ ಆಟವಾಡುತ್ತಿದ್ದಾರೆ.
ಯಂಗ್ ಇಂಡಿಯಾ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಯುವ ಪಡೆಯೊಂದಿಗೆ ಲಂಕಾಗೆ ತೆರಳಿತ್ತು. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತ ನಡುವೆ ತ್ರಿಕೋನ ಟಿ20 ಸರಣಿ ನಡೆಯುತ್ತಿದೆ.