ಬಿಸಿಸಿಐ ಕಾಂಟ್ರ್ಯಾಕ್ಟ್: ಕೊಹ್ಲಿ, ಭುವನೇಶ್ವರ್ ಎ+ ಕೆಟಗರಿ, ಧೋನಿ, ಅಶ್ವಿನ್ ಎ ಕೆಟಗರಿ

ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಹಿರಿಯ ಆಪ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಎ ಕೆಟಗರಿಯಲ್ಲಿ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿ ಐವರು ಆಟಗಾರರನ್ನು ಎ+ಕೆಟಗರಿಯಲ್ಲಿ ಆಯ್ಕೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೆಹಲಿ: ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಹಿರಿಯ ಆಪ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಎ ಕೆಟಗರಿಯಲ್ಲಿ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ, ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ಮತ್ತಿತರ  ಐವರು ಆಟಗಾರರನ್ನು ಎ+ ಕೆಟಗರಿಯಲ್ಲಿ ಆಯ್ಕೆ ಮಾಡಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್  , ಭುವನೇಶ್ವರ್ ಕುಮಾರ್, ಹಾಗೂ ಜಸ್ಪ್ರೀತ್ ಬ್ರೂಮಾ ಈ ಪಟ್ಟಿಯಲ್ಲಿದ್ದು, ವಾರ್ಷಿಕವಾಗಿ ತಲಾ 7 ಕೋಟಿ ರೂ ಸಂಭಾವನೆ ಪಡೆಯಲಿದ್ದಾರೆ.

ದೋನಿ ಹಾಗೂ ಆರ್ . ಅಶ್ವಿನ್ , ರವೀಂದ್ರ ಜಡೇಜಾ, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ಅಂಜಿಕ್ಯಾ ರಹಾನೆ, ಮತ್ತು ವೃದ್ಧಿಮಾನ್ ಶಾ ಅವರನ್ನು ಎ ಕೆಟಗರಿಯಲ್ಲಿ ಆಯ್ಕೆ ಮಾಡಲಾಗಿದ್ದು, ತಲಾ 5 ಕೋಟಿ ರೂ ನಿಗದಿಪಡಿಸಲಾಗಿದೆ.

ಇನ್ನೂ ಕೆ.ಎಲ್. ರಾಹುಲ್, ಉಮೇಶ್ ಯಾದವ್, ಕುಲದೀಪ್ ಯಾದವ್, ಯಜುರ್ವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್  ಬಿ ಕೆಟಗರಿಯಲ್ಲಿದ್ದು, ತಲಾ 3 ಕೋಟಿ ರೂ. ನಿಗದಿಪಡಿಸಲಾಗಿದೆ.

ಕೇದರ್  ಜಾದವ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಮತ್ತು ಜಯಂತ್ ಯಾದವ್  ಸಿ ಕೆಟಗರಿಯಲ್ಲಿ ಆಯ್ಕೆಯಾಗಿದ್ದು, 1 ಕೋಟಿ ರೂ. ಪಡೆಯಲಿದ್ದಾರೆ.

ಅಕ್ಬೋಬರ್ 2017 ರಿಂದ ಸೆಪ್ಟೆಂಬರ್ 2018ರವರೆಗಿನ ವಾರ್ಷಿಕ ಒಪ್ಪಂದ ಇದಾಗಿದ್ದು, ಕಾರ್ಯಕ್ಷಮತೆ ಹಾಗೂ ಭಾರತೀಯ ಕ್ರಿಕೆಟಿಗೆ ಅವರ ಅಗತ್ಯತೆ ಗುರುತಿಸಿ ಆಡಳಿತಾತ್ಮಕ ಸಮಿತಿ  ಸಂಭಾವನೆ ನಿಗದಿಪಡಿಸಿದೆ ವಿಶ್ವ ಕ್ರಿಕೆಟ್ ಗೆ ಹೋಲಿಸಿದರೆ ಈ ಮೊತ್ತ ಉತ್ತಮವಾಗಿದೆ ಎಂದು ಬಿಸಿಸಿಐ ಹೇಳಿದೆ.

 ಮಹಿಳೆ ಕ್ರಿಕೆಟ್ ಆಟಗಾರರಲ್ಲಿ ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಣ್ಣ ಅಗ್ರ ಪಟ್ಟಿಯಲ್ಲಿದ್ದು, ವಾರ್ಷಿಕವಾಗಿ 50 ಲಕ್ಷ ಸಂಭಾವನೆ ಪಡೆಯಲಿದ್ದಾರೆ.

ಆದಾಗ್ಯೂ,  ಆಟಗಾರರ ಆದಾಯ  ಪರಿಹಾರ ಹಾಗೂ ಸಮೀಕರಣ ಫಂಡ್ ( (PR/CEF) ಸ್ಥಾಪಿಸಲು ಆಡಳಿತಾತ್ಮಕ ಸಮಿತಿ ಅನುಮೋದನೆ ನೀಡಿದ್ದು, ಇದಕ್ಕಾಗಿ ಬಿಸಿಸಿಐ ವಾರ್ಷಿಕವಾಗಿ ಅಂದಾಜು 125 ಕೋಟಿ ರೂ, ಪೂರೈಸಲಿದೆ ಎಂದು ಬಿಸಿಸಿಐ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com