• Tag results for ದೆಹಲಿ

ಪೌರತ್ವ ಕಾಯ್ದೆಗೆ ವಿರೋಧ: ಇಸ್ಲಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ, ಹೊತ್ತಿ ಹುರಿದ ದೆಹಲಿ, ಬಸ್‌ಗಳಿಗೆ ಬೆಂಕಿ, 60 ಗಾಯ

ದೆಹಲಿಯ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಹಲವು ಬಸ್‌ಗಳು ಮತ್ತು ಬೈಕ್ ಗಳು ಬೆಂಕಿಗೆ ಅಹುತಿಯಾಗಿದ್ದು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

published on : 16th December 2019

ಇಬ್ಬಗೆಯ ನೀತಿ: ಶಿವಸೇನೆ ಬೆಂಬಲಿಸುತ್ತಿರುವ ಕಾಂಗ್ರೆಸ್ ವಿರುದ್ಧ ಮಾಯಾವತಿ ವಾಗ್ದಾಳಿ 

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಬೆಂಬಲಿಸಿದಲ್ಲದೇ,  ಸಾವರ್ಕರ್ ಕುರಿತ ರಾಹುಲ್ ಗಾಂಧಿ ಹೇಳಿಕೆಯನ್ನು ವಿರೋಧಿಸಿರುವ ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಎಸ್ಪಿ ನಾಯಕಿ ಮಾಯಾವತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

published on : 15th December 2019

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಆಗ್ರಹಿಸಿ ಗೃಹ ಸಚಿವ ಶಾಗೆ ರಕ್ತದಿಂದ ಪತ್ರ ಬರೆದ ಅಂತಾರಾಷ್ಟ್ರೀಯ ಶೂಟರ್ 

ನಿರ್ಭಯಾ ಅತ್ಯಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆೆ ನೀಡುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

published on : 15th December 2019

ಪೌರತ್ವ ಕಾಯ್ದೆ ವಿರೋಧಿಸಿ ಹಿಂಸಾಚಾರ: ಅಸ್ಸಾಂ ಹೊಸ ಕಾಶ್ಮೀರ- ಅಧೀರ್ ರಂಜನ್ ಚೌಧರಿ

ಪೌರತ್ವ ( ತಿದ್ದುಪಡಿ) ಕಾಯ್ದೆ ವಿರೋಧಿಸಿ ಈಶಾನ್ಯ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ, ಅಧೀರ್ ರಂಜನ್ ಚೌಧರಿ ಅಸ್ಸಾಂ ಹೊಸ ಕಾಶ್ಮೀರವಾಗುತ್ತಿದೆ ಎಂದಿದ್ದಾರೆ.

published on : 15th December 2019

ಸರ್ದಾರ್ ವಲ್ಲಭಬಾಯ್ ಪಟೇಲ್ ಪುಣ್ಯ ತಿಥಿ, ಪ್ರಧಾನಿ ಮೋದಿ, ಅಮಿತ್ ಶಾ ಸ್ಮರಣೆ 

ದೇಶದ ಪ್ರಥಮ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪುಣ್ಯ ತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಮರಿಸಿದ್ದಾರೆ.

published on : 15th December 2019

ಭಾರತೀಯ ಸೇನೆಯ ಕೈ ಸೇರಿದ ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್!

ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.

published on : 15th December 2019

ದೆಹಲಿಯ ಶಾಲಿಮಾರ್ ಬಾಗ್‌ನಲ್ಲಿ ಅಗ್ನಿ ಅವಘಡ: ಮೂವರು ಸಜೀವ ದಹನ

ದೆಹಲಿಯ ಶಾಲಿಮರ್ ಬಾಗ್ ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಸ್ಪತ್ರೆಗೆ ದಾಖಲಿಸಲಾದ ಗಾಯಾಳುಗಳ ಪೈಕಿ ಮೂವರು ಮೃತಪಟ್ಟಿದ್ದಾರೆ.

published on : 14th December 2019

ಪತಿ ಆತ್ಮಹತ್ಯೆ: ಸುದ್ದಿ ಬಳಿಕ 5 ವರ್ಷದ ಮಗಳ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ಕೇಳಿದ ಬಳಿಕ ನೊಂದ ಮಹಿಳೆಯರು ತನ್ನ 5 ವರ್ಷದ ಮಗಳನ್ನು ಕೊಂದು, ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೊಯ್ಡಾ ಸೆಕ್ಟರ್ 128ನಲ್ಲಿ ಶುಕ್ರವಾರ ಸಂಜೆ ನಡೆದಿದೆ. 

published on : 14th December 2019

100 ಪ್ರಮುಖ ಮಾರ್ಗಗಳಲ್ಲಿ ವಿಶ್ವ ದರ್ಜೆಯ ಖಾಸಗಿ ರೈಲುಗಳ ಸಂಚಾರ

ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.

published on : 14th December 2019

ದೆಹಲಿ ವಿಧಾನಸಭೆ ಚುನಾವಣೆ: ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಮೊರೆ ಹೋದ ಆಮ್ ಆದ್ಮಿ ಪಾರ್ಟಿ 

ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಿದ್ದತೆ ಮಾಡಿಕೊಂಡಿರುವ ಆಮ್ ಆದ್ಮಿ ಪಾರ್ಟಿ ಅದಕ್ಕಾಗಿ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಅವರನ್ನು ಸಂಪರ್ಕಿಸಿದೆ.

published on : 14th December 2019

18 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸಿಮಿ ಉಗ್ರನ ಬಂಧನ

ಹದಿನೆಂಟು ವರ್ಷಗಳಿಂದ ತಲೆಮರೆಸಿಕೊಂಡು, ಪೊಲೀಸರಿಗೆ ಬೇಕಿದ್ದ ನಿಷೇಧಿತ ಸಿಮಿ ಸಂಘಟನೆಯ ಉಗ್ರನನ್ನು ಕೊನೆಗೂ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

published on : 14th December 2019

ಬಡ ಕುಟುಂಬ ದಿನಕ್ಕೆ 20 ಸಿಲಿಂಡರ್ ಬಳಕೆ ಮಾಡಲು ಹೇಗೆ ಸಾಧ್ಯ?: ಸಿಎಜಿ ಆಘಾತಕಾರಿ ವರದಿ

ಬಡ ಕುಟುಂಬವೊಂದು ದಿನಕ್ಕೆ 20 ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡಲು ಹೇಗೆ ಸಾಧ್ಯ ಎಂಬ ಗಂಭೀರ ಪ್ರಶ್ನೆಯನ್ನು ಸಿಎಜಿ (ಕಂಟ್ರೋಲರ್​ ಆ್ಯಂಡ್​ ಆಡಿಟರ್​ ಜನರಲ್ ಆಫ್​ ಇಂಡಿಯಾ​) ವರದಿ ಎತ್ತಿದೆ.

published on : 14th December 2019

ರಾಹುಲ್ ಗಾಂಧಿಯನ್ನು ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಕಾರ್ಯತಂತ್ರ

ಲೋಕಸಭಾ ಚುನಾವಣೆ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ಗಾಂಧಿಯನ್ನು  ಆರು ತಿಂಗಳ ಬಳಿಕ ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. 

published on : 14th December 2019

ವಿಂಡೀಸ್ ವಿರುದ್ಧ ಏಕದಿನ ಸರಣಿ: ಭುವಿ ಬದಲಿಗೆ ಶಾರ್ದೂಲ್ ಠಾಕೂರ್ ಗೆ ಸ್ಥಾನ

ಪ್ರಮುಖ ಬೆಳವಣಿಗೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಉದಯೋನ್ಮುಖ ಆಟಗಾರ ಶಾರ್ದೂಲ್ ಠಾಕೂರ್ ಗೆ ಸ್ಥಾನ ನೀಡಲಾಗಿದೆ.

published on : 14th December 2019

ಪೌರತ್ವ ತಿದ್ದುಪಡಿ ವಿರೋಧಿಸುವ ಹಕ್ಕು ರಾಜ್ಯಸರ್ಕಾರಗಳಿಗೆ ಇಲ್ಲ: ಗೃಹ ಸಚಿವಾಲಯ

ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ವಿರೋಧಿಸುವ ಹಕ್ಕು ರಾಜ್ಯಸರ್ಕಾರಗಳಿಗೆ ಇಲ್ಲ ಎಂದು ಹೇಳಿದೆ.

published on : 14th December 2019
1 2 3 4 5 6 >