'What kind of life is this?': ದೆಹಲಿಯ ಕಳಪೆ ಗುಣಮಟ್ಟದ ಗಾಳಿಯನ್ನು 'ಗ್ಯಾಸ್ ಚೇಂಬರ್' ಗೆ ಹೋಲಿಸಿದ ಯೋಗಿ ಆದಿತ್ಯ ನಾಥ್!

ಉತ್ತರ ಪ್ರದೇಶದಲ್ಲಿ ಪರಿಸರವು ಸಾಕಷ್ಟು ಉತ್ತಮವಾಗಿದೆ, ಮಾಲಿನ್ಯವಿಲ್ಲ. ಮಾಲಿನ್ಯವಿಲ್ಲದ ಕಾರಣ ಕಡಿಮೆ ರೋಗಗಳಿವೆ. ಮಾಲಿನ್ಯ ಇದ್ದರೆ ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ.
Yogi Adithy
ಯೋಗಿ ಆದಿತ್ಯನಾಥ್ ಮತ್ತು ರೇಖಾ ಗುಪ್ತಾ
Updated on

ಗೋರಖ್ ಪುರ: ಅಭಿವೃದ್ಧಿ ಕಾರ್ಯಗಳು ನಮ್ಮ ಜನರ ಉಸಿರುಗಟ್ಟಿಸುತ್ತಿಲ್ಲ, ಉತ್ತರ ಪ್ರದೇಶದ ಜನರು ಸ್ವಚ್ಛ ವಾತಾವರಣವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟವನ್ನು 'ಗ್ಯಾಸ್ ಚೇಂಬರ್'ಗೆ ಹೋಲಿಸಿದ್ದಾರೆ.

ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ಪರಿಸರ ನಾಶ ಇಂದಿನ ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಪರಿಸರವು ಸಾಕಷ್ಟು ಉತ್ತಮವಾಗಿದೆ, ಮಾಲಿನ್ಯವಿಲ್ಲ. ಮಾಲಿನ್ಯವಿಲ್ಲದ ಕಾರಣ ಕಡಿಮೆ ರೋಗಗಳಿವೆ. ಮಾಲಿನ್ಯ ಇದ್ದರೆ ಅದು ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ. ನಾವು ಆಮ್ಲಜನಕದ ಪೂರೈಕೆಯಲ್ಲಿ ರಾಜಿ ಮಾಡಿಕೊಂಡರೆ, ಇಡೀ ದೇಹವು ನರಳುತ್ತದೆ ಎಂದು ಅವರು ವಿವರಿಸಿದರು.

ದೆಹಲಿಯ ಗಾಳಿಯ ಗುಣಮಟ್ಟದ ಬಗ್ಗೆ ಮಾತನಾಡಿದ ಅವರು, ದೆಹಲಿಯ ಸ್ಥಿತಿಯನ್ನು ನೀವು ನೋಡಿದ್ದೀರಾ? ಅದು ಗ್ಯಾಸ್ ಚೇಂಬರ್‌ನಂತೆ ಭಾಸವಾಗುತ್ತಿದೆ. ಪರಿಸ್ಥಿತಿ ಭೀಕರವಾಗಿದೆ; ಉಸಿರಾಟ ಕಷ್ಟ, ಮತ್ತು ಕಣ್ಣುಗಳಲ್ಲಿ ಉರಿಯುವ ಸಂವೇದನೆ ಇರುತ್ತದೆ. ಆಸ್ತಮಾದಿಂದ ಬಳಲುತ್ತಿರುವವರು, ವೃದ್ಧರು ಮತ್ತು ಮಕ್ಕಳು ಮನೆಯೊಳಗೆ ಇರಲು ವೈದ್ಯರು ಸಲಹೆ ನೀಡುತ್ತಾರೆ. ಇದು ಯಾವ ರೀತಿಯ ಜೀವನ? ಎಂದು ಪ್ರಶ್ನಿಸಿದ್ದಾರೆ.

Yogi Adithy
ಬಾಬರ್‌ನ ಗೌರವಿಸಿ ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಪರಿಸರಕ್ಕೆ ಯಾವುದೇ ಅಡಚಣೆ ಉಂಟಾದರೆ ಇದೇ ರೀತಿಯ ಪರಿಸ್ಥಿತಿ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು. ನಾವು ಅದೃಷ್ಟವಂತರು, ಉಸಿರುಗಟ್ಟಿಸುವ ವಾತಾವರಣವಿಲ್ಲದೆ ನಾವು ಅಭಿವೃದ್ಧಿ ಹೊಂದಿದ್ದೇವೆ ಎಂದು ಆದಿತ್ಯನಾಥ್ ಹೇಳಿದರು.

ಶನಿವಾರ ಬೆಳಿಗ್ಗೆ 9 ಗಂಟೆಗೆ ದೆಹಲಿಯ ಗಾಳಿಯ ಗುಣಮಟ್ಟವನ್ನು "ಕಳಪೆ" ವರ್ಗದಲ್ಲಿ ದಾಖಲಿಸಲಾಗಿದೆ, ವಾಯು ಗುಣಮಟ್ಟ ಸೂಚ್ಯಂಕ (AQI) 211 ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶ ತೋರಿಸಿದೆ.

ಸಿಪಿಸಿಬಿ ಪ್ರಕಾರ, ಶೂನ್ಯ ಮತ್ತು 50 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು 'ಉತ್ತಮ', 51 ರಿಂದ 100 'ತೃಪ್ತಿದಾಯಕ', 101 ರಿಂದ 200 'ಮಧ್ಯಮ', 201 ರಿಂದ 300 'ಕಳಪೆ', 301 ರಿಂದ 400 'ಅತ್ಯಂತ ಕಳಪೆ' ಮತ್ತು 401 ರಿಂದ 500 'ಗಂಭೀರ' ಎಂದು ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com