ಅಕ್ರಮ ಸಂಬಂಧ, ಪತ್ನಿಗೆ ಕಿರುಕುಳ ಆರೋಪ: ಕಾಂಟ್ರ್ಯಾಕ್ಟ್ ತಡೆ ಹಿಡಿದ ಬಿಸಿಸಿಐ

ಅಕ್ರಮ ಸಂಬಂಧ ಹಾಗೂ ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ...
ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್
ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್
ನವದೆಹಲಿ: ಅಕ್ರಮ ಸಂಬಂಧ ಹಾಗೂ ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ಸೆಂಟ್ರಲ್ ಕಾಂಟ್ರ್ಯಾಕ್ಟ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಡೆ ಹಿಡಿದಿದೆ.
ಬಿಸಿಸಿಐ ಬುಧವಾರ ಬಿಡುಗಡೆ ಮಾಡಿರುವ ಕಾಂಟ್ರ್ಯಾಕ್ಟ್ ಆಟಗಾರರ ಪಟ್ಟಿಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮಿಯನ್ನು ಕೈಬಿಡಲಾಗಿದೆ.
ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರು ತಮ್ಮ ಪತಿ ಅಕ್ರಮ ಸಂಬಂಧ ಹೊಂದಿದ್ದು, ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅವರ ಕಾಂಟ್ರ್ಯಾಕ್ಟ್ ಅನ್ನು ತಡೆ ಹಿಡಿಯಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದ ಬಗೆಗಿನ ಎಲ್ಲಾ ವರದಿಗಳು ಬಿಸಿಸಿಐ ಗಮನಕ್ಕೆ ಬಂದಿದೆ ಮತ್ತು ಅದು ಅವರ ವೈಯಕ್ತಿಕ ವಿಷಯ. ಆದರೆ ಈ ಕುರಿತು ಶಮಿ ಪತ್ನಿ ಕೋಲ್ಕತಾ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದು, ಅವರ ವಿರುದ್ಧ ಪೊಲೀಸ್ ತನಿಖೆ ನಡೆದರೆ ಮುಂದಿನ ಕ್ರಮದ ಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇನ್ನು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ನನ್ನ ವೈಯಕ್ತಿಕ ಜೀವನದ ಕುರಿತು ಪ್ರಕಟಗೊಳ್ಳುತ್ತಿರುವ ಎಲ್ಲಾ ಸುದ್ದಿಗಳೂ ಹಾಗೂ ಆರೋಪಗಳು ಸುಳ್ಳು. ನನ್ನ ವಿರುದ್ಧ ಪಿತೂರಿ ನಡೆಸಲಾಗಿದ್ದು, ನನ್ನ ಹೆಸರನ್ನು ಹಾಳು ಮಾಡಲು ಹಾಗೂ ನನ್ನ ಕ್ರೀಡಾ ವೃತ್ತಿಪರತೆಗೆ ಧಕ್ಕೆ ತರಲು ಈ ರೀತಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com