ಬೆಂಗಳೂರು: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅವರು ವಿಸ್ಡನ್ ಇಂಡಿಯಾ ಆಲ್ಮನ್ಯಾಕ್ ನ ವರ್ಷದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಮಹಿಳೆಯರ ಸಾಧನೆಯನ್ನು ಮೆಚ್ಚಿ ವಿಸ್ಡನ್ ಇಂಡಿಯಾ ಅಲ್ಮನ್ಯಾಕ್ ವಾರ್ಷಿಕ ಪುಸ್ತಕದ ಮುಖಪುಟದಲ್ಲಿ ಭಾರತ ಮಹಿಳೆಯ ಕ್ರಿಕೆಟ್ ತಂಡದ ಆಟಗಾರ್ತಿಯರ ಚಿತ್ರವನ್ನು ಪ್ರಕಟಿಸಿದೆ.
ಇನ್ನು ಮಹಿಳಾ ತಂಡದ ದೀಪ್ತಿ ಶರ್ಮಾ ಅವರಿಗೆ ವರ್ಷದ ಆಟಗಾರ್ತಿ ಗೌರವ ನೀಡಲಾಗಿದೆ. ಹಿರಿಯ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತು ಹಿರಿಯ ಸ್ಪಿನ್ನರ್ ಎರ್ರಪಳ್ಳಿ ಪ್ರಸನ್ನ ಅವರಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.