ಅಸಮಾಧಾನಗೊಂಡಿದ್ದ ಕಾರ್ತಿಕ್ ಬಹುಶಃ ಈಗ ಶಾಂತನಾಗಿರಬಹುದು: ರೋಹಿತ್ ಶರ್ಮಾ

6ನೇ ಕ್ರಮಾಂಕದಲ್ಲಿ ತನ್ನನ್ನು ಆಡಿಸಲಿಲ್ಲ ಎಂಬ ಕಾರಣಕ್ಕೆ ದಿನೇಶ್ ಕಾರ್ತಿಕ್ ನನ್ನ ವಿರುದ್ಧ ಅಸಮಾಧನಗೊಂಡಿದ್ದ, ಬಹುಶಃ ಈಗ ಆತ ಶಾಂತನಾಗಿರಹುದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್
ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್
Updated on
ಕೊಲಂಬೋ: 6ನೇ ಕ್ರಮಾಂಕದಲ್ಲಿ ತನ್ನನ್ನು ಆಡಿಸಲಿಲ್ಲ ಎಂಬ ಕಾರಣಕ್ಕೆ ದಿನೇಶ್ ಕಾರ್ತಿಕ್ ನನ್ನ ವಿರುದ್ಧ ಅಸಮಾಧನಗೊಂಡಿದ್ದ, ಬಹುಶಃ ಈಗ ಆತ ಶಾಂತನಾಗಿರಹುದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ನಿನ್ನೆ ಕೊಲಂಬೋದಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ಪೈನಲ್ ಪಂದ್ಯದ ಗೆಲುವಿನ ಬಳಿಕ ನಡೆದ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಬಾಂಗ್ಲಾದೇಶದ ವಿರುದ್ಧದ ಪೈನಲ್ ಪಂದ್ಯದಲ್ಲಿ ನನಗನ್ನಿಸಿದ್ದು, 18 ಓವರ್ ತುಂಬಾ ನಿರ್ಣಾಯಕವಾಗಿರುತ್ತದೆ. ಹೀಗಾಗಿ ಆ ಓವರ್ ವೇಳೆಗೆ ಕ್ರೀಸ್ ನಲ್ಲಿ ಓರ್ವ ಅನುಭವಿ ಬ್ಯಾಟ್ಸಮನ್ ಇರಬೇಕಾಗುತ್ತದೆ. ಇದೇ ಕಾರಣಕ್ಕೆ 13ನೇ ಓವರ್ ನಲ್ಲಿ ನಾನು ಔಟ್ ಆದ ಬಳಿಕ ಕೂಡಲೇ ಕಾರ್ತಿಕ್ ರನ್ನು ಕಳುಹಿಸದೇ ವಿಜಯ್ ಶಂಕರ್ ರನ್ನು ಕಣಕ್ಕಿಳಿಸಿದೆ. ನಾನು ಡಗೌಟ್ ಗೆ ಬಂದಾಗ ಕಾರ್ತಿಕ್ ಕೊಂಚ ಅಸಮಾಧಾನದಿಂದ ಇದ್ದ. ಆತನ ಮುಖಭಾವನೆ ನನಗೆ ಅರ್ಥವಾಯಿತು. ಆಗ ನಾನು ಆತನನ್ನು ಉದ್ದೇಶಿಸಿ ಅಂತಿಮ ಹಂತದಲ್ಲಿ ಅನುಭವಿ ಆಟಗಾರ  ಕ್ರೀಸ್ ನಲ್ಲಿರುವುದು ಉತ್ತಮ. ನಿನ್ನಲ್ಲಿನ ಬ್ಯಾಟಿಂಗ್ ಕೌಶಲ್ಯದಿಂದಾಗಿ ತಂಡಕ್ಕೆ ನೆರವಾಗಲಿದ್ದು, ನೀನು ಪಂದ್ಯವನ್ನು ಪೂರ್ಣಗೊಳಿಸಬೇಕು. ಇದೇ ಕಾರಣಕ್ಕೆ ವಿಜಯ್ ಶಂಕರ್ ನನ್ನು ನಿನಗಿಂತ ಮೊದಲು ಕಳುಹಿಸಿದೆ ಎಂದು ಹೇಳಿದೆ.
ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ರುಬೆಲ್ ಹುಸೇನ್ ಎಸೆದ 19ನೇ ಓವರ್ ನಲ್ಲಿ ಕಾರ್ತಿಕ್ ಎರಡು ಸಿಕ್ಸರ್ ಮತ್ತು 2 ಬೌಂಡರಿ ಸಿಡಿಸಿ ಪಂದ್ಯಕ್ಕೆ ರೋಚಕತೆ ತಂದರು. ಅನುಭವಿ ಆಟಗಾರನಿಂದ ಮಾತ್ರ ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ. ನನಗೆ ಗೊತ್ತಿತ್ತು.. ದಿನೇಶ್ ಕಾರ್ತಿಕ್ ಎಂತಹುದೇ ಪರಿಸ್ಥಿತಿ ಎದುರಿಸಲು ಸಿದ್ಧನಾಗಿರುತ್ತಾನೆ ಎಂದು. ಈ ಹಿಂದೆ ಆಫ್ರಿಕಾ ಪ್ರವಾಸದಲ್ಲೂ ಆತನ ಪ್ರದರ್ಶನವನ್ನು ನಾನು ನೋಡಿದ್ದೆ. ಆದರೆ ಅಲ್ಲಿ ಕಾರ್ತಿಕ್ ಹೆಚ್ಚು ಸಮಯ ಮತ್ತು ಅವಕಾಶ ಸಿಕ್ಕರಲಿಲ್ಲ. ಆದರೆ ಇಂದಿನ ಆತನ ಪ್ರದರ್ಶನ ನಿಜಕ್ಕೂ ಆತನಲ್ಲಿನ ವಿಶ್ವಾಸವನ್ನು ಹೆಚ್ಚಿಸಿದ್ದು, ಅದಕ್ಕಿಂತ ಮುಖ್ಯವಾಗಿ ಕಾರ್ತಿಕ್ ಗೆ ತನ್ನ ಮೇಲೆ ಹೆಚ್ಚು ಭರವಸೆ ಮೂಡಿದೆ. ಹೀಗಾಗಿ ಯಾವುದೇ ಸಂದರ್ಭ ಎದುರಾದರೂ ಅದನ್ನು ಎದುರಿಸಲು ಕಾರ್ತಿಕ್ ಸಜ್ಜಾಗಿರುತ್ತಾನೆ. ಯಾವುದೇ ಕ್ರಮಾಂಕದಲ್ಲಿ ಕಾರ್ತಿಕ್ ಆಡಿದರೂ ಅದಕ್ಕೆ ನ್ಯಾಯ ಒದಗಿಸುತ್ತಾನೆ ಎಂಬ ಭರವಸೆ ನನಗಿದೆ. ಕ್ರಿಕೆಟ್ ನಲ್ಲಿ ಇಂತಹ ಗುಣಗಳೇ ನಮಗೆ ಮತ್ತು ತಂಡಕ್ಕೆ ಹೆಚ್ಚೆಚ್ಚು ಯಶಸ್ಸು ತಂದುಕೊಡುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ವಾಷಿಂಗ್ಟನ್ ಸುಂದರ್ ವೃತ್ತಿ ಜೀವನಕ್ಕೆ ಹಾಲಿ ಸರಣಿ ಅತ್ಯುತ್ತಮ ಅಡಿಪಾಯ
ಇದೇ ವೇಳೆ ಬೌಲರ್ ವಾಷಿಂಗ್ಟನ್ ಸುಂದರ್ ಕುರಿತು ಮಾತನಾಡಿದ ರೋಹಿತ್ ಶರ್ಮಾ, ಇಡೀ ಸರಣಿಯಲ್ಲಿ ಸುಂದರ್ ಬೌಲಿಂಗ್ ಅತ್ಯುತ್ತಮವಾಗಿತ್ತು. ಸುಂದರ್ ವೃತ್ತಿ ಜೀವನಕ್ಕೆ ಮತ್ತು ತಂಡದ ಪಾಲಿಗೆ ಆತನ ಬೌಲಿಂಗ್ ನೆರವಾಗಿತ್ತು. ಹೊಸ ಚೆಂಡಿನಲ್ಲಿ ಆತ ನೀಡಿದ ಪ್ರದರ್ಶನ ನಿಜಕ್ಕೂ ಶ್ಲಾಘನೀಯ. ಪವರ್ ಪ್ಲೇ ಓವರ್ ಗಳಲ್ಲಿ ಹೊಸ ಆಟಗಾರನಿಗೆ ಒತ್ತಡ ನಿಭಾಯಿಸುವುದು ಕಷ್ಟ. ಆದರೆ ಸುಂದರ್ ಅದನ್ನು ಯಶಸ್ವಿಯಾಗಿ ನಿಭಾಸಿಯಿಸಿದ. ರನ್ ಗಳಿಗೆ ಕಡಿವಾಣ ಹಾಕುವುದಷ್ಟೇ ಅಲ್ಲದೇ ನಿಯಮಿತವಾಗಿ ವಿಕೆಟ್ ಕಬಳಿಸಿದ್ದೂ ಕೂಡ ತಂಡಕ್ಕೆ ನೆರವಾಯಿತು ಎಂದು ಹೇಳಿದ್ದಾರೆ.\

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com