ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಹೊಡೆಯುವಾಗ, ಅವರಂತೆ ಏಕೆ ಡಯೆಟ್ ಮಾಡಬೇಕು?: ಶಹಜಾದ್

ವಿಶ್ವದ ನಂ.1 ಕ್ರಿಕೆಟಿಗ ವಿರಾಟ್ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಹೊಡೆಯುವಾಗ ಅವರಂತೆ ಏಕೆ ಡಯೆಟ್ ಮಾಡಬೇಕು ಎಂದು ಆಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್'ಮನ್ ಮೊಹಮ್ಮದ್ ಶಹಜಾದ್ ಹೇಳಿದ್ದಾರೆ...
ಆಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್'ಮನ್ ಮೊಹಮ್ಮದ್ ಶಹಜಾದ್
ಆಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್'ಮನ್ ಮೊಹಮ್ಮದ್ ಶಹಜಾದ್
Updated on
ನವದೆಹಲಿ: ವಿಶ್ವದ ನಂ.1 ಕ್ರಿಕೆಟಿಗ ವಿರಾಟ್ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಹೊಡೆಯುವಾಗ ಅವರಂತೆ ಏಕೆ ಡಯೆಟ್ ಮಾಡಬೇಕು ಎಂದು ಆಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್'ಮನ್ ಮೊಹಮ್ಮದ್ ಶಹಜಾದ್ ಹೇಳಿದ್ದಾರೆ. 
ಸಂದರ್ಶನವೊಂದರಲ್ಲಿ ಮಾತನಾಡಿರುವ ಶಹಜಾದ್ ವಿರಾಟ್ ಕೊಹ್ಲಿಯಂತೆ ಫಿಟ್ನೆಸ್ ನತ್ತ ಹೆಚ್ಚು ಗಮನ ಹರಿಸುವ ಅನಿವಾರ್ಯತೆ ನನಗಿಲ್ಲ. ಅವರಿಗಿಂತ ದೊಡ್ಡ ಸಿಕ್ಸರ್ ಗಳನ್ನು ಹೊಡೆಯುವ ಬಲ ನನ್ನಲ್ಲಿರುವಾಗ ನಾನೇಕೆ ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. 
90 ಕೆ.ಜೆಗೂ ಹೆಚ್ಚು ತೂಕವಿರುವ ಶಹಜಾದ್ ಫಿಟ್ನೆಸ್ ಮುಖ್ಯ. ಆದರೆ, ಆಗಂತ ತಿನ್ನುವುದನ್ನು ಕಡಿಮೆ ಮಾಡುವುದಿಲ್ಲ. 50 ಓವರ್ ಬ್ಯಾಟಿಂಗ್ ಹಾಗೂ ಕೀಪಿಂಗ್ ಮಾಡುವ ಸಾಮರ್ಥ್ಯವಿರುವಾಗ ಕೊಹ್ಲಿಯಂತೆ ದೇಹವನ್ನೇಕೆ ದಂಡಿಸಬೇಕು ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. 
ಟೀಂ ಇಂಡಿಯಾ ವಿರುದ್ಧ ಮುಂದಿನ ತಿಂಗಳು ಚೊಚ್ಚಲ ಟೆಸ್ಟ್ ಆಡಲು ಶಹಜಾದ್ ಅವರು ಭಾರತದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 
ಭಾರತದಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಭಾರತೀಯ ತಂಡ ಉನ್ನತ ಆಟಗಾರರು ನನಗೆ ಚೆನ್ನಾಗಿ ಗೊತ್ತಿದ್ದಾರೆ. ಭಾರತದ ತಂಡದಲ್ಲಿ ಧೋನಿ ನನಗೆ ಆಪ್ತ ಗೆಳೆಯ. ಸುರೇಶ್ ರೈನಾ, ಶಿಖರ್ ಧವನ್ ರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆಂದು ತಿಳಿಸಿದ್ದಾರೆ. 
ಹೆಚ್ಚಿನ ತೂಕದಿಂದಾಗಿ ಕ್ರೀಡಾಪಟುಗಳಿಂದ ಟೀಕೆಗಳನ್ನು ಎದುರಿಸಿದ್ದೇನೆಂದ ಅವರು ಟೀಕಾಕಾರರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 50 ಓವರ್ ಆಡುವ ಸಾಮರ್ಥ್ಯ ನನಗಿದೆ ಎಂಬುದು ನನ್ನ ಕೋಚ್ ಗೆ ತಿಳಿಸಿದೆ. 50 ಓವರ್ ಗಳ ಕಾಲ ನಾನು ಬ್ಯಾಟ್ ಹಿಡಿದು ಆಡಬಲ್ಲೆ. ನನ್ನ ತೂಕ ದೊಡ್ಡ ವಿಚಾರವೆಂದು ನಾನೆಂದೂ ಆಲೋಚಿಸಿರಲಿಲ್ಲ. ಇದು ನನಗೆ ಸಮಸ್ಯೆಯೂ ಆಗಿಲ್ಲ ಎಂದಿದ್ದಾರೆ. 
ಇದೇ ವೇಳೆ ಕ್ರಿಕೆಟ್ ಮಂಡಳಿಯ ಅನುಮತಿಪಡೆಯದೆಯೇ ಪೇಶಾವರ ಸ್ಥಳೀಯ ಟೂರ್ನಮೆಂಟ್ ನಲ್ಲಿ ಆಡಿದ್ದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ಅಧಿಕಾರಿಗಳು ಶಹಜಾದ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಸಮನ್ಸ್ ಜಾರಿ ಮಾಡಿದ್ದರು. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತಪ್ಪು ಪ್ರತೀಯೊಬ್ಬರೂ ಮಾಡುತ್ತಾರೆಂದಿದ್ದಾರೆ. ಅಲ್ಲದೆ, ಇದೇ ವೇಳೆ 2015ರ ಅಫ್ಘಾನಿಸ್ದಾನದ ಮೊದಲ ವಿಶ್ವಕಪ್ ಪಂದ್ಯಾವಳಿಗೆ ತಮ್ಮನ್ನು ಆಯ್ಕೆ ಮಾಡದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com