ಐಪಿಎಲ್ 2018: ಮುಂಬೈ ವಿರುದ್ಧ ಡೆಲ್ಲಿಗೆ 11 ರನ್ ಜಯ
ಕ್ರಿಕೆಟ್
ಐಪಿಎಲ್ 2018: ಮುಂಬೈ ವಿರುದ್ಧ ಡೆಲ್ಲಿಗೆ 11 ರನ್ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ , ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 11 ರನ್ಗಳ ಸೋಲನುಭವಿಸಿದೆ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ , ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 11 ರನ್ಗಳ ಸೋಲನುಭವಿಸಿದೆ. ಈ ಮೂಲಕ ಮುಂಬಯಿ ಇಂಡಿಯನ್ಸ್ ತಾನು ಪ್ಲೇ ಆಫ್ ಗೆ ತೆರಳುವ ಅವಕಾಶವನ್ನು ಕಳೆದುಕೊಂಡಿದೆ.
ಡೆಲ್ಲಿ ಒಡ್ಡಿದ್ದ 175ರನ್ ಗುರಿ ಬೆನ್ನತ್ತಿದ ಮುಂಬೈ 9.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 163ರನ್ ಗಳಿಸಲಷ್ಟೇ ಸಾಧ್ಯವಾಗಿದೆ.
ಮುಂಬೈ ಪರವಾಗಿ ಲೆವೀಸ್ (48) ಬಿಸಿಜೆ ಕಟ್ಟಿಂಗ್ (37), ಹಾರ್ದಿಕ್ ಪಾಂಡ್ಯ (27) ರನ್ ಗಳಿಸಿ ಮಿಂಚಿದರು ಆದರೆ ಪಂದ್ಯದ ಕಡೆ ಗಳಿಗೆಯಲ್ಲಿ ಒಂದರ ಹಿಂದೊಂದರಂತೆ ವಿಕೆಟ್ ಪತನವಾದಗಿ ಹನ್ನೊಂದು ರನ್ ಗಳ ಹಿನ್ನಡೆ ಅನುಭವಿಸಿತು.
ದೆಹಲಿ ಪರವಾಗಿ ಲಮಿಖಾನೆ, ಮ್ಯಾಕ್ಸ್ವೆಲ್, ಮಿಶ್ರಾ ತಲಾ ಮೂರು ಮೂರು ವಿಕೆಟ್ ಕಬಳಿಸಿದ್ದರು.
ಇನ್ನು ಇದಕ್ಕೆ ಮುನ್ನ ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟದೊಡನೆ 174 ರನ್ ಗಳಿಸಿತ್ತು. ತಂಡ ದ ಪರವಾಗಿ ರಿಷಬ್ ಪಂತ್ 64, ಮ್ಯಾಕ್ಸ್ ವೆಲ್ 22, ವಿಜಯ್ ಶಂಕರ್ ಅಜೇಯ 43, ಅಭಿಶೇಖ್ ಶರ್ಮಾ 15 ರನ್ ಗಳಿಸಿದ್ದಾರೆ.
ಇನ್ನು ಮುಂಬೈ ಪರ ಪಾಂಡ್ಯ, ಬೂಮ್ರ, ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ