ಐಪಿಎಲ್ 2018: ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 2018 ಟಿ 20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ....
ಐಪಿಎಲ್ 2018:  ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ
ಐಪಿಎಲ್ 2018: ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ
Updated on: 
ಕೋಲ್ಕತ್ತಾ:  ಇಂಡಿಯನ್ ಪ್ರೀಮಿಯರ್ ಲೀಗ್ 2018 ಟಿ 20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ  ನಡೆದ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ  ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕೊತಾ ನೈಟ್ ರೈಡರ್ಸ್ 25 ರನ್ ಜಯ ಸಾಧಿಸಿದೆ.
ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ  ಪಂದ್ಯದಲ್ಲಿ ಕೋಲ್ಕತ್ತಾ ಗೆಲ್ಲುವ ಮೂಲಕ ಶುಕ್ರವಾರ ನಡೆಯಲಿರುವ ಫೈನಲ್ಸ್ ಗಾಗಿನ ಹೋರಾಟದಲ್ಲಿ ಸನ್‌ರೈಸರ್ಸ್ ಹೈದಾರಾಬಾದ್ ತಂಡವನ್ನು ಎದುರಿಸಲಿದೆ.
ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತ್ತಾ 20 ಓವರ್ ಗಳಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು. ತಂಡದ ಪರವಾಗಿ ದಿನೇಶ್ ಕಾರ್ತಿಕ್ (52),  ಆಂಡ್ರೆ ರಸೆಲ್ (49*) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ರಾಜಸ್ಥಾನ ಪರವಾಗಿ ಕೆ. ಗೌತಮ್, ಜೆ. ಅರ್ಚರ್, ಬೆನ್ ಲಾಫ್ಲಿನ್ ತಲಾ 2 ವಿಕೆಟ್ ಪಡೆದರೆ ಎಸ್. ಗೋಪಾಲ್ ಒಂದು ವಿಕೆಟ್ ಕಿತ್ತರು.
ಇನ್ನು ಕೀಲ್ಕತ್ತಾ ನೀಡಿದ್ದ 170ರನ್ ಗುರಿ  ಬೆನ್ನತ್ತಿದ ರಾಜಸ್ಥಾನ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿಕೊಳ್ಳುವಷ್ಟು ಮಾತ್ರವೇ ಯಶಸ್ವಿಯಾಗಿತ್ತು.
ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಸಿದ ಅರ್ಧ ಶತಕ ಸಹ ಅವರ ನೆರವಿಗೆ ಬರಲಿಲ್ಲ. ಅಜಿಂಕ್ಯ ರೆಹಾನೆ (46), ರಾಹುಲ್ ತ್ರಿಪಾಠಿ(20) ರನ್ ಗಳಿಸಿ ಔಟಾಗಿದ್ದರು.
ಕೆಕೆಆರ್ ಪರವಾಗಿ ಪಿಯೂಶ್ ಚಾವ್ಲಾ ಎರಡು ವಿಕೆಟ್ ಪಡೆದರೆ ಪ್ರಶಾಂತ್ ಕಿಷ್ಣ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ರಾಜಸ್ಥಾನ ಈ ಸೋಲಿನೊಡನೆ ಪ್ರಸಕ್ತ ಐಪಿಎಲ್ ಸರಣಿಯಿಂದ ಹೊರ ಬಿದ್ದಿದೆ.
ಮಂಗಳವಾರ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಫೈನಲ್ಸ್ ಪ್ರವೇಶಿಸಿದ್ದರೆ ಸೋತ ತಂಡ ಹೈದರಾಬಾದ್ ಫೈನಲ್‌ಗೆ ತಲುಪಲು ಎರಡನೇ ಅವಕಾಶ ಪಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com