ಐಪಿಎಲ್: ಯುವಿಗೆ ನಿರ್ಗಮನದ ಹಾದಿ ತೋರಿಸಿದ ಕಿಂಗ್ಸ್ ಇಲೆವನ್

ಸ್ಥಳೀಯ ಆಟಗಾರ ಹಾಗೂ 2011ರ ಏಕದಿನ ವಿಶ್ವಕಪ್‌ ಮತ್ತು 2007ರ ಟಿ20 ವಿಶ್ವಕಪ್‌ ಹೀರೋ ಯುವರಾಜ್‌ ಸಿಂಗ್ ಸೇರಿದಂತೆ ಎಂಟು...
ಯುವರಾಜ್ ಸಿಂಗ್
ಯುವರಾಜ್ ಸಿಂಗ್
ನವದೆಹಲಿ: ಸ್ಥಳೀಯ ಆಟಗಾರ ಹಾಗೂ 2011ರ ಏಕದಿನ ವಿಶ್ವಕಪ್‌ ಮತ್ತು 2007ರ ಟಿ20 ವಿಶ್ವಕಪ್‌ ಹೀರೋ ಯುವರಾಜ್‌ ಸಿಂಗ್ ಸೇರಿದಂತೆ ಎಂಟು ಆಟಗಾರರಿಗೆ ಕಿಂಗ್ಸ್ ಇಲೆವನ್ ಪಂಜಾಬ್ ನಿರ್ಗಮನದ ಹಾದಿ ತೋರಿಸಿದೆ.
ಮುಂದಿನ ತಿಂಗಳು 2019ನೇ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 12ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕಿಂಗ್ಸ್ ಇಲೆವನ್ ತಂಡ, ಸ್ಫೋಟಕ ಬ್ಯಾಟ್ಸ್ ಮನ್ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್, ಆಸ್ಟ್ರೇಲಿಯಾ ಆಟಗಾರ ಆರೋನ್ ಪಿಂಚ್ ಸೇರಿದಂತೆ ಎಂಟು ಜನರಿಗೆ ಕೊಕ್ ನೀಡಿ, 9 ಪ್ರಮುಖ ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
ನಾಯಕ ಆರ್ ಅಶ್ವಿನ್ ಹಾಗೂ ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಸೇರಿದಂತೆ 9 ಪ್ರಮುಖ ಆಟಗಾರರನ್ನು ನಾವು ಉಳಿಸಿಕೊಂಡಿದ್ದೇವೆ. ತಂಡದ ಸಮತೋಲನಕ್ಕಾಗಿ ಆಟಗಾರರನ್ನು ಉಳಿಸಿಕೊಳ್ಳುವ ಸಂದರ್ಭದಲ್ಲಿ ಹಲವು ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಕಿಂಗ್ ಇಲೆವನ್ ತಂಡದ ನೂತನ ಕೋಚ್ ಮೈಕ್ ಹೆಸ್ಸೊನ್ ಅವರು ಹೇಳಿದ್ದಾರೆ.
2018 ಐಪಿಎಲ್‌ ಹರಾಜಿನಲ್ಲಿ ಹಲವು ನಿರೀಕ್ಷೆಗಳೊಂದಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಫ್ರಾಂಚೈಸಿ ಯುವಿಯನ್ನು ಖರೀದಿಸಿತ್ತು. ಆದರೆ ಯುವರಾಜ್ ಸಿಂಗ್ ಅವರು, ಸರಾಸರಿ 65 ರನ್ ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಅವರನ್ನು ಕೈಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com