ಬ್ರೆಂಡನ್ ಮೆಕ್ಕಲಂ-ಕೊರಿ ಆಂಡರ್ಸನ್
ಕ್ರಿಕೆಟ್
ಆರ್‌ಸಿಬಿಯಿಂದ ಹೊರಬಿದ್ದ ಸ್ಫೋಟಕ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?
2019ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಭರ್ಜರಿ ತಯಾರಿ ನಡೆಸಿದ್ದು ಈಗಾಗಲೇ ತಂಡದ ಪ್ರಮುಖ 6 ಆಟಗಾರರನ್ನು ಕೈಬಿಟ್ಟಿದೆ...
ಕೇಪ್ ಟೌನ್: 2019ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಭರ್ಜರಿ ತಯಾರಿ ನಡೆಸಿದ್ದು ಈಗಾಗಲೇ ತಂಡದ ಪ್ರಮುಖ 6 ಆಟಗಾರರನ್ನು ಕೈಬಿಟ್ಟಿದೆ.
ಆರ್ಸಿಬಿ ತಂಡದಿಂದ ಹೊರಬಿದ್ದ ಖ್ಯಾತ ಕ್ರಿಕೆಟಿಗರಾದ ಬ್ರೆಂಡನ್ ಮೆಕ್ಕಲಂ ಹಾಗೂ ಕೊರಿ ಆಂಡರ್ಸನ್ ಇದೀಗ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ. 2018ರ ಐಪಿಎಲ್ ನಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಆರ್ಸಿಬಿ ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಮೆಕ್ಕಲಂ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಆವೃತ್ತಿಯಲ್ಲಿ ಆರ್ಸಿಬಿ ಉತ್ತಮ ಪ್ರದರ್ಶನ ನೀಡಲಿ ಎಂದೂ ಹಾರೈಸಿದ್ದಾರೆ.
ಇದೇ ವೇಳೆ ಮತ್ತೋರ್ವ ಆಟಗಾರ ಕೊರಿ ಆಂಡರ್ಸನ್ ಕೂಡ ಟ್ವೀಟ್ ಮಾಡಿದ್ದು ಆರ್ಸಿಬಿ ತಂಡ ಹಾಗೂ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದಲ್ಲಿ ಅತ್ಯುತ್ತಮ ಅನುಭವ ಪಡೆದಿದ್ದೇನೆ. ಇಷ್ಟೆ ಅಲ್ಲ ಆರ್ಸಿಬಿ ಶ್ರೇಷ್ಠ ಫ್ರಾಂಚೈಸಿ. ಈ ಆವೃತ್ತಿಯಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿ ಎಂದಿದ್ದಾರೆ.
Lent invaluable experience to the younger guys and we know how much everyone in the squad looked up to you! The Chinnaswamy faithful were fortunate to have got a glimpse of your explosive batting
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ