ಗೆರೆ ದಾಟಿದರೆ ನಾವೂ ಹಿಂತಿರುಗಿಸಿ ಕೊಡುತ್ತೇವೆ: ಕ್ಯಾಪ್ಟನ್ ಕೋಹ್ಲಿ ಎಚ್ಚರಿಕೆ ನೀಡಿದ್ದು ಯಾರಿಗೆ?

ನ.21 ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಸ್ಲೆಡ್ಜಿಂಗ್ ಚಾಳಿ ಹೊಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯಕ್ಕೂ ಮುನ್ನ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನ.21 ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಸ್ಲೆಡ್ಜಿಂಗ್ ಚಾಳಿ ಹೊಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯಕ್ಕೂ ಮುನ್ನ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.
ಭಾರತ ತಂಡ ಎಂದಿಗೂ ತಾನಾಗಿಯೇ ಮತ್ತೊಬ್ಬರನ್ನು ಕೆಣಕುವುದನ್ನು ಪ್ರಾರಂಭಿಸುವುದಿಲ್ಲ. ಭಾರತ ತಂಡ ಎಂದಿಗೂ ಆತ್ಮಾಭಿಮಾನದ ಗೆರೆ ಹಾಕಿಕೊಂಡಿರುತ್ತದೆ, ಆ ಗೆರೆ ದಾಟಿದರೆ ಹಿಂತಿರುಗಿಸಿ ಅದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಆಸ್ಟ್ರೇಲಿಯಾದ ಆಕ್ರಮಣಶೀಲತೆ ವರ್ತನೆಯನ್ನು ವ್ಯಾಖ್ಯಾನಿಸುತ್ತಾ ಮಾತನಾಡಿರುವ ವಿರಾಟ್ ಕೊಹ್ಲಿ, ಆಕ್ರಮಣಶೀಲತೆ ಎನ್ನುವುದು ಫೀಲ್ಡ್ ನಲ್ಲಿರುವ ಪರಿಸ್ಥಿತಿಯನ್ನು ಆಧರಿಸುತ್ತದೆ. ನಮ್ಮ ವಿರುದ್ಧ ಎದುರಾಳಿ ತಂಡದವರು ಆಕ್ರಮಣಶೀಲ ವರ್ತನೆ ತೋರಿದರೆ ನಾವೂ ಅದಕ್ಕೆ ತಕ್ಕಂತೆಯೇ ಪ್ರತಿಕ್ರಿಯೆ ನೀಡುತ್ತೇವೆ, ನಾವಾಗಿಯೇ ಏನನ್ನೂ ಮಾಡುವುದಿಲ್ಲ. ನಾವು ಆತ್ಮಾಭಿಮಾನದ ಗೆರೆ ಹಾಕಿಕೊಂಡಿರುತ್ತೇವೆ ಅದನ್ನು ದಾಟಿ ಬಂದರೆ ನಾವು ಅದಕ್ಕೆ ತಕ್ಕೆ ಪ್ರತ್ಯುತ್ತರವನ್ನೂ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com