ನಾನಿರುವವರೆಗೂ ಕಾಶ್ಮೀರ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಅವಕಾಶವಿಲ್ಲ: ಇರ್ಫಾನ್ ಪಠಾಣ್

ನಾನಿರುವವರೆಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲ, ಉತ್ತಮ ಪ್ರದರ್ಶನದಿಂದ ಮಾತ್ರ ಆಟಗಾರರು ತಂಡಕ್ಕೆ ಆಯ್ಕೆಯಾಗಬೇಕು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಶ್ರೀನಗರ: ನಾನಿರುವವರೆಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲ, ಉತ್ತಮ ಪ್ರದರ್ಶನದಿಂದ ಮಾತ್ರ ಆಟಗಾರರು ತಂಡಕ್ಕೆ ಆಯ್ಕೆಯಾಗಬೇಕು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಬರೋಡ ತಂಡದಲ್ಲಿ ಸ್ಥಾನವಂಚಿತನಾಗಿ ಜಮ್ಮು ಮತ್ತು ಕಾಶ್ಮೀರ ತಂಡದ ಮೆಂಟರ್​ ಹಾಗೂ ಹಿರಿಯ ಆಟಗಾರನಾಗಿ ಕಣಕ್ಕಿಳಿದಿರುವ ಇರ್ಪಾಣ್​ ಪಠಾಣ್​ ಕೋಟಾಗೆ ಮನ್ನಣೆ ನೀಡಿದರೆ ಕ್ರಿಕೆಟ್ ಹಾಗೂ ತಂಡದ ಅವನತಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕ್ರೀಡೆಯಲ್ಲಿ ಕೋಟಾ ಅಥವಾ ಮೀಸಲಾತಿ ಪದ್ದತಿಗೆ ಅವಕಾಶ ನೀಡಬಾರದು, ಒಂದು ವೇಳೆ ಮಾಡಿಕೊಟ್ಟರೆ ತಂಡದ ಅವನತಿಯಾಗುತ್ತದೆ. ಜೊತೆಗೆ ನಿಜವಾದ ಪ್ರತಿಭೆಗೆ ಅವಕಾಶ ಸಿಗುವುದಿಲ್ಲ. ನಾನು ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿ ಇರುವವರೆಗೂ ಇಲ್ಲಿನ ಎರಡು ಭಾಗದ ಯಾವುದೇ ಆಟಗಾರ ತನ್ನ ಪ್ರದರ್ಶನದ ಮೂಲಕ ಆಯ್ಕೆಯಾಗಬೇಕೆ ಹೊರೆತು ಪ್ರಾದೇಶಿಕ ಕೋಟಾದಿಂದಲ್ಲ ಎಂದು ಪಠಾಣ ಖಡಕ್ ಆಗಿ ಉತ್ತರಿಸಿದ್ದಾರೆ.
ಮೊನ್ನೆ ಕೊನೆಗೊಂಡ ತ್ರಿಪುರ ವಿರುದ್ಧದ ರಣಜಿ ಪಂದ್ಯದಲ್ಲಿ  ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಪಠಾಣ್ ಈ ಜಯ ನಮ್ಮ ಒಗ್ಗಟ್ಟಿಗೆ ಸಂದಿದ್ದಾಗಿದೆ. ಇದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ. ಜಮ್ಮು ಮತ್ತು ಕಾಶ್ಮೀರ ಉಳಿದ ತಂಡಗಳಂತಲ್ಲ, ಇದು ಎರಡು ಪ್ರತ್ಯೇಕ ಭಾಗವಾಗಿದೆ. ಆದರೆ ಎರಡು ಭಾಗದಲ್ಲಿ ಉತ್ತಮ ಸಾಮರ್ಥ್ಯವುಳ್ಳವರಿಗೆ ಮಾತ್ರ ತಂಡದಲ್ಲಿ ಅವಕಾಶವಿರುತ್ತದೆ. ಇಲ್ಲಿ ನಾನಿರುವವರೆಗೂ ಜಮ್ಮು-ಕಾಶ್ಮೀರ ಇಂತಿಷ್ಟು ಆಟಗಾರರೆಂದು ಫಿಕ್ಸ್​ ಮಾಡಬೇಕೆಂಬುದಕ್ಕೆ ನನ್ನ ವಿರೋಧವಿದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ ಬಂದಿರುವ ಆಟಗಾರರ ನಡುವೆ ಪ್ರಾದೇಶಿಕ ಬೇಧ ಭಾವನೆ ಬರದಂತೆ ನೋಡಿಕೊಂಡು ಎಲ್ಲರನ್ನು ಒಂದೇ ದಾರಿಯಲ್ಲಿ ಕೊಂಡೊಯ್ಯುವುದು ನನ್ನ ಜಾವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com