ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ: ಕೋಚ್ ರಮೇಶ್ ಪವಾರ್ ಆರೋಪಕ್ಕೆ ಮಿಥಾಲಿ ರಾಜ್ ಬೇಸರ

ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ ಎಂದು ಕೋಚ್ ರಮೇಶ್ ಪವಾರ್ ಆರೋಪಕ್ಕ ಭಾರತೀಯ ಹಿರಿಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಅವರು ಗುರುವಾರ ಹೇಳಿದ್ದಾರೆ...
ಮಿಥಾಲಿ ರಾಜ್
ಮಿಥಾಲಿ ರಾಜ್

ನವದೆಹಲಿ: ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ ಎಂದು ಕೋಚ್ರಮೇಶ್ ಪವಾರ್ ಆರೋಪಕ್ಕ ಭಾರತೀಯ ಹಿರಿಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಅವರು ಗುರುವಾರಹೇಳಿದ್ದಾರೆ.

ಮಿಥಾಲ್ ರಾಜ್ ವಿರುದ್ಧ ಹಲವು ಆರೋಪ ಮಾಡಿದ್ದ ಕೋಚ್ರಮೇಶ್ ಪವಾರ್ ಅವರು,ಮಿಥಾಲಿರಾಜ್ ತಂಡದಲ್ಲಿನ ತಮ್ಮ ಪಾತ್ರವನ್ನು ನಿರ್ಲಕ್ಷಿಸಿದ್ದಾರೆ. ಕೇವಲ ಅವರು ತಮ್ಮ ವೈಯುಕ್ತಿಕದಾಖಲೆಗಾಗಿ ಆಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪಕ್ಕೆ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಟ್ವಿಟ್ಟರ್ ನಲ್ಲಿ ಮಿಥಾಲಿ ರಾಜ್ ಅವರು ಟ್ವೀಟ್ ಮಾಡಿದ್ದಾರೆ.

ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಂದ ಸಾಕಷ್ಟುನೋವಾಗಿದೆ. ಆರೋಪಗಳಿಂದ ನನ್ನ ಭಾವನೆಗಳಿಗೆ ನೋವಾಗಿದೆ. 20 ವರ್ಷಗಳಿಂದ ನಾನು ದೇಶಕ್ಕಾಗಿ  ಆಡುತ್ತಿದ್ದೇನೆ. ನನ್ನ ಪರಿಶ್ರಮ, ಬದ್ಧತೆವ್ಯರ್ಥಗೊಂಡಿದೆ. ಇದೀಗ ನನ್ನ ದೇಶಪ್ರೇಮ ಬಗ್ಗೆಯೇ ಸಂಶಯಪಡಲಾಗುತ್ತಿದೆ. ನನ್ನ ಕಲೆಯನ್ನುಪ್ರಶ್ನಿಸಲಾಗುತ್ತಿದೆ. ಎಲ್ಲವೂ ಮಣ್ಣುಪಾಲಾದಂತಿದೆ. ಇಂದು ನನ್ನ ಜೀವನದಲ್ಲಿಯೇ ಕರಾಳ ದಿನವಾಗಿದೆ.ದೇವರು ನನಗೆ ಶಕ್ತಿ ನೀಡಲಿ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com